ಮಂದಿರ ನಿರ್ವಣದಲ್ಲಿ ಸರ್ವರನ್ನೂ ತೊಡಗಿಸಿಕೊಳ್ಳಿ

web 5
Published on

ಕೊಪ್ಪ: ಅಯೋಧ್ಯೆಯಲ್ಲಿ ನಿರ್ವಣವಾಗಲಿರುವ ರಾಮಮಂದಿರ ರಾಷ್ಟ್ರ ಮಂದಿರವಾಗಬೇಕು ಎಂದು ಆರ್​ಎಸ್​ಎಸ್ ಶಿವಮೊಗ್ಗ ವಿಭಾಗದ ಪ್ರಚಾರಕ ಬಾಲಕೃಷ್ಣ ಹೇಳಿದರು.

ಪಟ್ಟಣದ ಜ್ಞಾನವಾಹಿನಿ ಶಿಕ್ಷಣ ಸಂಸ್ಥೆಯಲ್ಲಿ ಆರ್​ಎಸ್​ಎಸ್ ಆಯೋಜಿಸಿದ್ದ ರಾಮ ಮಂದಿರ ನಿರ್ಮಾಣ ಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಮ ಮಂದಿರಕ್ಕಾಗಿ ಈ ಹಿಂದೆ ಅನೇಕ ಹೋರಾಟ, ಬಲಿದಾನ ಮಾಡಿದ್ದೇವೆ. ಅವೆಲ್ಲವನ್ನೂ ಸ್ಮರಿಸುತ್ತ ಇಂದು ನಾವು ರಾಮನ ಆದರ್ಶ ಪಾಲಿಸಬೇಕು. ರಾಮನ ಆದರ್ಶಗಳು ಇಡೀ ಜಗತ್ತಿಗೆ ಮಾದರಿ. ಎಲ್ಲರಿಗೂ ತಿಳಿಸಿಕೊಡಲು ರಾಮ ಮಂದಿರ ನಿರ್ವಣವಾಗಬೇಕು. ಈ ಕಾರ್ಯದಲ್ಲಿ ಎಲ್ಲ ಧರ್ಮ, ಜಾತಿ, ಪಂಥ, ಪಕ್ಷದವರನ್ನು ಭೇದಗಳನ್ನು ಮರೆತು ತೊಡಗಿಸಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net