ಮುಂದಿನ ಪೀಳಿಗೆಗೆ ಸಂಸ್ಕೃತಿ ತಿಳಿಸಿ

rss
ವಿಜಯಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ದೇವನಹಳ್ಳಿ ತಾಲೂಕು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಹಮ್ಮಿಕೊಂಡಿದ್ದ ವಿಜಯದಶಮಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಧ್ವಜ ವಂದನೆ ಸ್ವೀಕರಿಸಲಾಯಿತು. ಪ್ರಾಂತ್ಯ ಕಾರ್ಯವಾಹಕ ಜಯಪ್ರಕಾಶ್, ಪ್ರಗತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಸತೀಶ್ ಕುಮಾರ್ ಮೊದಲಾದವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ
ಭಾರತದ ಭವಿಷ್ಯ ಯುವ ಜನತೆಯಾಗಿದ್ದು, ಮುಂದಿನ ಪೀಳಿಗೆಗೆ ಸಂಸ್ಕಾರ, ಸಂಸ್ಕೃತಿ ತಿಳಿಸಬೇಕಿದೆ ಎಂದು ಪ್ರಾಂತ್ಯ ಕಾರ್ಯವಾಹಕ ಜಯಪ್ರಕಾಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ದೇವನಹಳ್ಳಿ ತಾಲೂಕು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘದ ಶಾಖೆಗಳು ಇನ್ನಷ್ಟು ಬಲಿಷ್ಠ ವಾಗುವುದರೊಂದಿಗೆ ಸಂಘದ ವಿಜಯದ ಸಂಕೇತವಾಗಬೇಕು. ದೇಶದ ಆರ್ಥಿಕತೆ ಬಲಿಷ್ಠವಾಗಬೇಕೆಂದರೆ ದೇಶೀಯ ವಸ್ತುಗಳನ್ನೇ ಕೊಳ್ಳುವಂತಾಗಬೇಕು. ಒಂದಕ್ಕೆ ಮತ್ತೊಂದು ಉಚಿತವೆನ್ನುವ ಪಾಶ್ಚಿಮಾತ್ಯ ಸಂಸ್ಕೃತಿಯ ವಸ್ತುಗಳನ್ನುಕೊಳ್ಳದೆ ಆರ್ಥಿಕತೆಯನ್ನು ಸದೃಢಗೊಳಿಸಿಕೊಳ್ಳಬೇಕಾಗಿದೆ ಎಂದರು.
ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿದ್ದು, ಹುಟ್ಟುಹಬ್ಬಗಳ ಸಂದರ್ಭದಲ್ಲಿ ದೀಪ ಆರಿಸುವ ಸಂಸ್ಕೃತಿ ಬಿಡಬೇಕು, ದೀಪ ಹಚ್ಚಿ ಜಗತ್ತನ್ನು ಬೆಳಗುವ ಸಂಸ್ಕೃತಿ ನಮ್ಮದು ಎಂದು ತಿಳಿಹೇಳಬೇಕು ಎಂದರು.
ಪ್ರಗತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಸತೀಶ್ ಕುಮಾರ್ ಮಾತನಾಡಿ, 1925ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಹೆಗಡೆವಾರ್ ಅವರಿಂದ ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ 100ನೇ ವರ್ಷಕ್ಕೆ ಕಾಲಿಟ್ಟಿದ್ದು, ಯುವಕರಲ್ಲಿ ಶ್ರದ್ಧೆ, ದೇಶಭಕ್ತಿ ಮೂಡಿಸುವುದರೊಂದಿಗೆ ಸದೃಢ ಯುವಕರನ್ನು ನಿರ್ಮಿಸುವ ಕೆಲಸ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ನಡೆಯುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net