ನೆಲಮಂಗಲದಲ್ಲಿ ಆರೆಸ್ಸೆಸ್​ ಪಥಸಂಚಲನ

27 10 2025_BNG_RURAL_PAGE_3
ನೆಲಮಂಗಲದಲ್ಲಿ ಆರೆಸ್ಸೆಸ್​ ಮುಖಂಡರು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪಥಸಂಚಲನ ಸಾರ್ವಜನಿಕರು ಗಣವೇಷಧಾರಿಗಳಿಗೆ ಹೂಮಳೆ ಸುರಿಸಿದರು.
Published on

ನೆಲಮಂಗಲ : ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ತುಂಬಿದ ಪ್ರಯುಕ್ತ ಭಾನುವಾರ ಸಂಜೆ ನಗರದಲ್ಲಿ ಗಣವೇಷಧಾರಿಗಳು ಆಕರ್ಷಕ ಪಥಸಂಚಲನ ನಡೆಸಿದರು.ನಗರದ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದ ಬಳಿ ಸಮಾವೇಶಗೊಂಡ ನೂರಾರು ಸ್ವಯಂ ಸೇವಕರು ವೀವರ್ಸ್​ ಕಾಲನಿ, ನಗರಸಭೆ ಪಂಪ್​ಹೌಸ್​ ಮುಂಭಾಗ, ಶ್ರೀನಿವಾಸ ಸಮುದಾಯ ಭವನದ ಮಂಭಾಗದಿಂದ ಹೊರಟು ಅಡೇಪೇಟೆಯ ರಸ್ತೆ ಮಾರ್ಗವಾಗಿ ಅಂಬೇಡ್ಕರ್​ ವೃತ್ತದಿಂದ ಬಸ್​ ನಿಲ್ದಾಣ ತಲುಪಿತು. ಅಲ್ಲಿಂದ ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದ ಆವರಣದಲ್ಲಿ ಸಂಪನ್ನಗೊಂಡಿತು.

ಮೆರವಣಿಗೆ ಸಂದರ್ಭದಲ್ಲಿ ದಾರಿಯುದ್ದಕ್ಕೂ ರಂಗೋಲಿ ಹಾಕಿದ್ದ ಮಹಿಳೆಯರು, ಮಕ್ಕಳು ಗಣವೇಷಧಾರಿಗಳಿಗೆ ಹಾಗೂ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜಯಘೋಷ ಕೂಗಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಸಂಚಾಲಕ ಲಕ್ಷ್ಮೀನಾರಾಯಣ್​, ನಗರ ಕಾರ್ಯವಾಹ ದಿನೇಶ್​, ಸ್ವಯಂ ಸೇವಕರಾದ ವೀರಭದ್ರಪ್ಪ, ವಿಜಯ್​ ಕುಮಾರ್​, ರಾಮಕೃಷ್ಣಪ್ಪ, ಸಪ್ತಗಿರಿಶಂಕರ್​ ನಾಯಕ್​, ಜಗದೀಶ್​ ಚೌಧರಿ, ಕೆ.ಪಿ.ಬೃಂಗೀಶ್​, ಎಂ.ಟಿ.ನವೀನ್​ಕುಮಾರ್​, ಸಿದ್ದರಾಜು, ಕೃಪಾನಂದ್​, ರಾಮಮೂರ್ತಿ,ಅಶ್ವತ್ಥ, ಕೇಶವ್​, ಅರುಣ್​ ರಾಜ್​, ಮಂಜುನಾಥ್​, ನಾಗರಾಜು ಇತರರು ಇದ್ದರು.

ಪೊಲೀಸ್​ ಬಂದೋಬಸ್ತ್​ : ಗ್ರಾಮಾಂತರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾರ್ಗದರ್ಶನದಲ್ಲಿ ನಗರ ಪೊಲೀಸ್​ ಠಾಣೆ ಆರಕ್ಷಕ ನಿರೀಕ್ಷಕ ಭರತ್​ಗೌಡ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net