

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹುಬ್ಬಳ್ಳಿ ಮಹಾನಗರ ವತಿಯಿಂದ ಸಂಘ ಶತಾಬ್ಧಿ ವರ್ಷ ಹಾಗೂ ವಿಜಯದಶಮಿ ನಿಮಿತ್ತ ಪಥಸಂಚಲನವನ್ನು ಅ. 5ರಂದು ಮಧ್ಯಾಹ್ನ 3 ಗಂಟೆಗೆ ನಗರದ ನೆಹರು ಮೈದಾನದಿಂದ ಆಯೋಜಿಸಲಾಗಿದೆ.
ಪ್ರಮುಖ ಬಡಾವಣೆಗಳಲ್ಲಿ ಗಣವೇಷಧಾರಿ ಸ್ವಯಂ ಸೇವಕರು ಪಥಸಂಚಲನ ನಡೆಸಲಿದ್ದಾರೆ. ನಂತರ ಸಂಜೆ 5.30ಕ್ಕೆ ನೆಹರು ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. </p><p>ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ನ ಚೇರ್ಮನ್ ಚನ್ನವೀರ ಮುಂಗುರವಾಡಿ ಅತಿಥಿಯಾಗಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೆಹಲಿ ಕೇಂದ್ರದ ಸಹ ಸರಕಾರ್ಯವಾಹ ಕೃಷ್ಣಗೋಪಾಲ ಅವರಿಂದ ಬೌದ್ಧಿಕ ನಡೆಯಲಿದೆ.
ಮೊದಲ ಮಾರ್ಗದಲ್ಲಿ ನೆಹರು ಮೈದಾನದಿಂದ ಪ್ರಾರಂಭಗೊಳ್ಳುವ ಪಥಸಂಚಲನ ಕೃಷ್ಣ ಭವನ, ಸರ್ ಸಿದ್ದಪ್ಪ ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನಪೇಟೆ, ಶ್ರೀ ತುಳಜಾಭವಾನಿ ವೃತ್ತ, ಪೆಂಡಾರಗಲ್ಲಿ, ಶ್ರೀ ಶಂಕರ ಮಠ, ಕಂಚಗಾರ ಗಲ್ಲಿ, ಹಿರೇಪೇಟೆ, ಸರಾಫ ಗಲ್ಲಿ ವೃತ್ತ, ಜವಳಿ ಸಾಲ, ಬೆಳಗಾವ ಗಲ್ಲಿ, ದುರ್ಗದಬೈಲ್ ವೃತ್ತದಲ್ಲಿ ಸಂಗಮಗೊಳ್ಳುವುದು.
ಎರಡನೇ ಮಾರ್ಗದಲ್ಲಿ ನೆಹರು ಮೈದಾನದಿಂದ ಪ್ರಾರಂಭಗೊಳ್ಳುವ ಪಥಸಂಚಲನ ಟೌನ್ಹಾಲ್, ಜೆ.ಸಿ. ನಗರ, ಶಕ್ತಿ ರಸ್ತೆ, ಸ್ಟೇಶನ್ ರಸ್ತೆ, ಗಣೇಶಪೇಟೆ ವೃತ್ತ, ಸಿಬಿಟಿ, ಮಕಾನದಾರ ಗಲ್ಲಿ, ಮಂಗಳವಾರಪೇಟೆ, ಇಟಗಿ ಮಾರುತಿ ಗಲ್ಲಿ, ರಾಧಾಕೃಷ್ಣ ಗಲ್ಲಿ, ದುರ್ಗದಬೈಲ ವೃತ್ತದಲ್ಲಿ ಎರಡೂ ಪಥ ಸಂಚಲನಗಳು ಸಂಗಮಗೊಂಡು ಒಟ್ಟಿಗೆ ಬ್ರಾಡವೇ, ಶಿವಾಜಿ ವೃತ್ತ, ಕೊಪ್ಪಿಕರ ರಸ್ತೆ, ಕೃಷ್ಣ ಭವನ ಮಾರ್ಗವಾಗಿ ನೆಹರು ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.