ಆರ್ ಎಸ್ ಎಸ್ ಪಥಸಂಚಲನ: 28ರಂದು ಶಾಂತಿ ಸಭೆ ನಡೆಸಿ, 30ಕ್ಕೆ ವಿಚಾರಣೆ

High court logo 2
Published on

ಕಲಬುರಗಿ: ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನಕ್ಕೆ ಅ.28ರಂದು ಅವಕಾಶ ನೀಡುವ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಅ.28ರಂದು ಎಲ್ಲ ಸಂಘಟನೆಗಳ ಶಾಂತಿ ಸಭೆಯನ್ನು ಜಿಲ್ಲಾಡಳಿತ ನಡೆಸಿ, ಸಲ್ಲಿಸಬೇಕು. ಅ.30 ರಂದು ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್ ತಿಳಿಸಿತು.

ನ್ಯಾಯಮೂರ್ತಿ ಎಂಜಿಎಸ್ ಕಮಲ ವಿಚಾರಣೆ ನಡೆಸಿದರು. ಸರ್ಕಾರದ ಪರ ಎಜಿಎಸ್ ವಾದ ಮಂಡಿಸಿ, ಶಾಂತಿ ಸುವ್ಯವಸ್ಥೆ ಹಿನ್ನೆಲೆಯಲ್ಲಿ ಇನ್ನಷ್ಟು ಸಮಯ ನೀಡಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಯಾಗಿ ಆರ್ ಎಸ್ ಎಸ್ ಪರ ವಕೀಲ ಅರುಣ ಶಾಮ್ ಈಗಾಗಲೇ ವಿಳಂಬವಾಗಿದ್ದು, ದಿನಕ್ಕೊಂದು ಸಂಘಟನೆಗಳು ಬರುತ್ತಿವೆ.

ನವೆಂಬರ್ 2ರಂದು ಮೆರವಣಿಗೆ ನಡೆಸಲು ಒಪ್ಪಿಕೊಂಡಿದ್ದೇವೆ. ಸಮಸ್ಯೆಯನ್ನು ಅವರು ಸೃಷ್ಟಿಸುತ್ತಿದ್ದಾರೆ. ಇತರ ಸಂಘಟನೆಗಳು ಆ ದಿನವೇ ಮೆರವಣಿಗೆ ನಡೆಸುವ ಮೂಲಕ ನಮ್ಮ ಮಾರ್ಗ ಮೆರವಣಿಗೆಯನ್ನು ತಡೆಯಲು ಯತ್ನಿಸುತ್ತಿವೆ. ಹಿಂದಿನ ವಿಚಾರಣೆಯಲ್ಲಿ ಮಾರ್ಗ ನೀಡುವುದಾಗಿ ಒಪ್ಪಂದವಾಗಿತ್ತು.

ನಾವು ಅವರಿಗೆ ಸಾಕಷ್ಟು ಸಮಯ ನೀಡಿದ್ದೇವೆ. ಈಗ ಹತ್ತು ಸಂಘಟನೆಗಳು ಬಂದು ಅದೇ ದಿನ ಮತ್ತು ಅದೇ ಸಮಯದಲ್ಲಿ ಪ್ರತಿಭಟನೆ ಮಾಡಲು ಬಯಸುತ್ತೇವೆ ಎಂದು ಹೇಳುತ್ತಿವೆ. ನಾವು ನಮ್ಮ ಕಾರ್ಯಕ್ರಮವನ್ನು ಮುಂದುವರಿಸುತ್ತೇವೆ — ಅವರಿಗೆ ತಕ್ಕ ರಕ್ಷಣೆಯನ್ನು ನೀಡಲಿ ಮತ್ತು ಇತರ ಸಂಘಟನೆಗಳು ಬೇರೆ ದಿನ ಪ್ರತಿಭಟನೆ ನಡೆಸಲಿ. ಎಂದು ವಿನಂತಿಕೊಂಡರು.

ವಾದ ವಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠದ ಎಂಜಿಎಸ್ ಕಮಲ ಅವರು ಶಾಂತಿ ಸಭೆ ನಡೆಸಿ, ವರದಿ ತನ್ನಿ. ಅ.30ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net