ಹುಬ್ಬಳ್ಳಿಯಲ್ಲಿ ಆರ್ ಎಸ್ ಎಸ್ ನಿಂದ ಆಕರ್ಷಕ ಪಥಸಂಚಲನ, ಸಾವಿರಾರು ಗಣವೇಷಧಾರಿಗಳು ಭಾಗಿ

IMG-20251005-WA0017-1.jpg
Published on

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಹುಬ್ಬಳ್ಳಿ ಮಹಾನಗರ ವತಿಯಿಂದ ವಿಜಯದಶಮಿ ಹಾಗೂ ಸಂಘದ ಶತಾಬ್ದಿ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಪಥಸಂಚಲನದಲ್ಲಿ ಸಾವಿರಾರು ಗಣವೇಷಧಾರಿಗಳು ಪಾಲ್ಗೊಂಡರು.

ಇಲ್ಲಿಯ ನೆಹರು ಮೈದಾನದಿಂದ ಮಧ್ಯಾಹ್ನ ೪.೧೫ಕ್ಕೆ ಆರಂಭವಾದ ಪಥಸಂಚಲನವು ಎರಡು ಮಾರ್ಗಗಳಲ್ಲಿ ಸಾಗಿತು.

ನಗರದ ಟೌನ್ ಹಾಲ್, ಸ್ಟೇಶನ್ ರಸ್ತೆ ಮೂಲಕ ಸಾಗಿದ ಒಂದು ಗಣವೇಷಧಾರಿಗಳ ಮಾರ್ಗ ಹಾಗೂ ರಾಯಣ್ಣ ವೃತ್ತ ದಾಜಿಬಾನಪೇಟ, ಹಿರೇಪೇಟ ಮೂಲಕ ಸಾಗಿದ ಇನ್ನೊಂದು ಮಾರ್ಗ ಸೇರಿ ಎರಡೂ ದುರ್ಗದಬೈಲ್ ನಲ್ಲಿ ಸಂಗಮವಾದವು.

ಗಣವೇಷಧಾರಿಗಳು ಸಾಗುವ ಮಾರ್ಗವನ್ನು ರಂಗೋಲಿ, ಹೂ ಹಾಕಿ ಶೃಂಗರಿಸಲಾಗಿತ್ತು, ದಾರಿಯುದ್ದಕ್ಕೂ ಸಾರ್ವಜನಿಕರು ಗಣವೇಷಧಾರಿಗಳಿಗೆ ಪುಷ್ಪ ಮಳೆ ಸುರಿದು ದೇಶ ಭಕ್ತಿ ಸಮರ್ಪಿಸಿದರು.

ಸುಮಾರು 7ಸಾವಿರಕ್ಕೂ ಹೆಚ್ಚು ಗಣವೇಷಧಾರಿ ಸ್ವಯಂಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಪುನಃ ನೆಹರು ಮೈದಾನದಲ್ಲಿ ಬಂದು ಸೇರಿದ ಪಥಸಂಚಲನ ನಂತರ ಸಾರ್ವಜನಿಕ ಸಭೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net