ಗುರುವಿನ ಸಾನ್ನಿಧ್ಯದಲ್ಲಿ ಶಿಕ್ಷಣ ಇರಬೇಕು

GURUKULA
Published on

ಕೊಪ್ಪ: ಭಾರತ ಪರಿಕಲ್ಪನೆಯ ಪ್ರಕಾರ ಗುರುವಿನ ಸಾನ್ನಿಧ್ಯದಲ್ಲಿ ಶಿಕ್ಷಣ ಇರಬೇಕು. ಅದರಂತೆ ಆರ್​ಎಸ್​ಎಸ್ ಪ್ರೇರಣೆಯಿಂದ ಪ್ರಬೋಧಿನಿ ಗುರುಕುಲ ಆರಂಭವಾಯಿತು. ಇಪ್ಪನಾಲ್ಕು ವರ್ಷಗಳಿಂದ ಗುರುವಿನ ಸಾನ್ನಿಧ್ಯ ಇರುವಂತೆಯೇ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ ಎಂದು ಆರ್​ಎಸ್​ಎಸ್ ಸಹ ಸರಕಾರ್ಯವಾಹ ಮುಕುಂದ ಹೇಳಿದರು.

ಅದ್ದಡ ಗ್ರಾಮದ ಪ್ರಬೋಧಿನಿ ಗುರುಕುಲದಲ್ಲಿ ಭಾನುವಾರ ಅರ್ಧಮಂಡಲೋತ್ಸವದ ನೆನಪಿನ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಸಂಸ್ಕೃತಿಯತ್ತ ವಿಶ್ವವೇ ಮುಖ ಮಾಡುತ್ತಿದೆ. ಮುಂದುವರಿದ ಈ ಕಾಲದಲ್ಲಿ ಕರೊನಾ ಸಮಯದಲ್ಲಿ ತಂತ್ರಜ್ಞಾನದ ಮೂಲ ವಿಶ್ವ ಗುರುವಿನತ್ತ ಮುಖ ಮಾಡಿದ್ದನ್ನು ಕಂಡಿದ್ದೇವೆ. ಆನ್​ಲೈನ್ ಕ್ಲಾಸ್​ಗಳ ಮೂಲಕ ಪಾಠಗಳನ್ನು ಹಮ್ಮಿಕೊಂಡಿದ್ದು ಇದಕ್ಕೆ ಉದಾಹರಣೆ ಎಂದರು.

ಆರ್​ಎಸ್​ಎಸ್ ನಿರಂತರವಾಗಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿದೆ. ಮುಂದಿನ ಪೀಳಿಗೆಗೆ ಸಂಸ್ಕಾರ, ಪದ್ಧತಿಗಳನ್ನು ನೀಡುವ ಕಲ್ಪನೆ ಇಟ್ಟು ಕೆಲಸ ಮಾಡಲಾಗುತ್ತಿದ್ದು, ಸುಧಾರಣೆ ಕೂಡ ಕಾಣುತ್ತಿದ್ದೇವೆ. ಭಾರತೀಯ ಸಂಸ್ಕೃತಿಯಲ್ಲಿ ವಿಕಾಸಗೊಂಡ ಅನೇಕ ಪಾರಂಪರಿಕ ವಿದ್ಯೆಗಳು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಆಗುತ್ತಿದ್ದವು. ಆದ್ದರಿಂದಲೇ ಅವೆಲ್ಲವೂ ಸಮಾಜದ ಉಪಯೋಗಕ್ಕೆ ಸಿಕ್ಕಿವೆ. ಪ್ರಾಚೀನ ಕಾಲದಲ್ಲಿ ಇಂತಹ ಜ್ಞಾನದ ರಕ್ಷಣೆಗಾಗಿಯೇ ಗುರುಕುಲಗಳು ತಲೆ ಎತ್ತಿದ್ದವು. ಸರ್ಕಾರಿ, ಖಾಸಗಿ ಶಾಲೆಗಳಲ್ಲಿಯೂ ಗುರುಕುಲ ಪರಿಕಲ್ಪನೆ ಪದ್ಧತಿ ತೆಗೆದುಕೊಂಡು ಹೋಗಲು ಪ್ರಯತ್ನ ನಡೆಸಬೇಕು ಎಂದರು.

ಮುಂದಿನ ಪಿಳೀಗೆಗೆ ನಮ್ಮ ಪದ್ಧತಿ ಉಳಿಸದಂತೆ ಆಗುತ್ತದೆ ಎಂದು ತಿಳಿಸಿದರು.

ನಾವು 13 ವರ್ಷದ ಒಳಗಿನ ಮಕ್ಕಳನ್ನು ಗುರುಕುಲ ಶಿಕ್ಷಣ ಪದ್ಧತಿಯಡಿ ತರಬೇಕು. ಆಗ

ತಿಳಿಸಲಾಗುತ್ತದೆ. ಸನಾತನ ಸಂಸ್ಕೃತಿ ಉಳಿಸಲು ಗುರುಕುಲ ಪದ್ಧತಿ ಬೆಳೆಸಬೇಕು. ಆದ್ದರಿಂದ

ಪದ್ಧತಿಯಲ್ಲಿ ನಮ್ಮ ಸಂಸ್ಕಾರ, ಸನಾತನ ಪದ್ಧತಿಯನ್ನು ಶಿಕ್ಷಣದ ರೂಪದಲ್ಲಿ

ಶೃಂಗೇರಿ ಶ್ರೀ ಶಾರದಾ ಮಠದ ಆಡಳಿತಾಧಿಕಾರಿ ವಿ.ಆರ್.ಗೌರೀಶಂಕರ್ ಹೇಳಿದರು. ಗುರುಕುಲ

ಅಂತ ಮಾತ್ರ ಸಮಾಜಕ್ಕೆ ತಿಳಿದಿದ್ದು ಈ ಅರ್ಧಮಂಡಲೋತ್ಸವದ ಪದ್ಧತಿ ತಿಳಿದಿರಲಿಲ್ಲ ಎಂದು

ಸಮಾಜದಲ್ಲಿ ಹೊಸ ಪದ್ಧತಿಗೆ ದಾರಿಯಾಗುತ್ತದೆ. ಸಿಲ್ವರ್ ಜುಬ್ಲಿ, ಗೋಲ್ಡನ್ ಜುಬ್ಲಿ

24 ವರ್ಷ ಸಲ್ಲುತ್ತಿದ್ದಂತೆ ಹಮ್ಮಿಕೊಂಡಿರುವ ಅರ್ಧಮಂಡಲೋತ್ಸವ ಕಾರ್ಯಕ್ರಮ

ಸನಾತನ ಸಂಸ್ಕೃತಿ ಉಳಿಸಲು ಅಗತ್ಯ: ಗುರುಕುಲಕ್ಕೆ

ಉದ್ಯಮಿ ಕಿಶೋರ್ ಕುಮಾರ್ ಹೆಗ್ಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಸಂಸ್ಕಾರ ಬಿಟ್ಟರೆ ಬದುಕಿಗೆ ಅರ್ಥ ಇರುವುದಿಲ್ಲ. ಜಗತ್ತು ಎಷ್ಟೇ ಆಧುನಿಕತೆ ಹೊಂದಿದರೂ ಹಳೇ ಬೇರನ್ನು ಮರೆಯಬಾರದು ಎಂದರು.

ಅರ್ಧಮಂಡಲೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷರು ವಿಜಯ್ ಸಂಕೇಶ್ವರ್ ಆಗಿದ್ದರು. ಕಾರ್ಯಕ್ರಮ ಸಂಪನ್ನಗೊಂಡ ನಿಮಿತ್ತ ಸಮಿತಿ ವಿಸರ್ಜಿಸಲಾಯಿತು. ಸ್ಮರಣ ಸಂಚಿಕೆಯಾದ ಸದಾತನ ಪ್ರಬೋಧ ಹಾಗೂ ಶಿಕ್ಷಾವಲಿ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಅರ್ಧಮಂಡಲೋತ್ಸವದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಚ್.ಬಿ.ರಾಜಗೋಪಾಲ್ ಒಂದು ವರ್ಷ ಕಾಲ ನಡೆದ ಅರ್ಧಮಂಡಲೋತ್ಸವದ ಮಾಹಿತಿ ನೀಡಿದರು. ಆರ್​ಎಸ್​ಎಸ್ ಪ್ರಮುಖರಾದ ಪಟ್ಟಾಭಿರಾಮ್ ಮಾತನಾಡಿದರು. ಆರ್​ಎಸ್​ಎಸ್ ಪ್ರಮುಖರಾದ ಡಾ. ರಾಮಚಂದ್ರ ಭಟ್, ಗುರುಕುಲದ ವ್ಯವಸ್ಥಾಪಕ ಉಮೇಶ್ ರಾವ್, ಗಜೇಂದ್ರ ಗೊರಸುಕೊಡಿಗೆ, ಮಹೇಶ್ ಬೆರಣಗೊಡು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net