

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಅ. 6ರಂದು ನಗರದಲ್ಲಿ ಪಥ ಸಂಚಲನ ಏರ್ಪಡಿಸಲಾಗಿದೆ.
ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಭಾರತ ಹೈಸ್ಕೂಲ್ ಮೈದಾನದಿಂದ ಪಥ ಸಂಚಲನ ಆರಂಭವಾಗಲಿದೆ. ನಂತರ 5.30ಕ್ಕೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಆರ್ಎಸ್ಎಸ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಮುಖ್ಯ ವಕ್ತಾರರಾಗಿ ಆಗಮಿಸುವರು. ಮೃತ್ಯುಂಜಯ ಬಡಿಗೇರಿ ಅತಿಥಿಯಾಗಿ ಪಾಲ್ಗೊಳ್ಳುವರು.
ಪಥ ಸಂಚಲನವು 2 ಮಾರ್ಗಗಳಲ್ಲಿ ಸಂಚರಿಸಲಿದ್ದು, ಮೊದಲ ಮಾರ್ಗವು ಭಾರತ ಹೈಸ್ಕೂಲ್ ಮೈದಾನದಿಂದ ರೀಗಲ್ ವೃತ್ತ, ಸೂಪರ್ ಮಾರುಕಟ್ಟೆ, ಗಾಂಧಿಚೌಕ್, ಹೆಬ್ಬಳ್ಳಿ ಅಗಸಿ, ಮಂಗಳವಾರಪೇಟೆ, ಕಾಮನಕಟ್ಟಿ, ಗಾಂಧಿಚೌಕ್, ಮಾರ್ಗವಾಗಿ ಭಾರತ್ ಹೈಸ್ಕೂಲ್ ತಲುಪಲಿದೆ. ಇನ್ನೊಂದು ಮಾರ್ಗ ಭಾರತ ಹೈಸ್ಕೂಲ್ ಮೈದಾನದಿಂದ ರೀಗಲ್ ವೃತ್ತ, ಮಹಾರಾಣಾ ಪ್ರತಾಪ ವೃತ್ತ, ಹಳೇ ಬಸ್ ನಿಲ್ದಾಣ, ವಿವೇಕಾನಂದ ವೃತ್ತ, ಟಿಕಾರೆ ರಸ್ತೆ, ಭೂಸಪ್ಪ ಚೌಕ, ಕೆಸಿಸಿ ಬ್ಯಾಂಕ್ ಮಾರ್ಗವಾಗಿ ಭಾರತ್ ಹೈಸ್ಕೂಲ್ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.