ಆರ್‌ಎಸ್‌ಎಸ್ ಪಥಸಂಚಲನ 22ರಂದು

wwwwww
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಜಯದಶಮಿ ಉತ್ಸವ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಅ. 22ರಂದು ಗಣವೇಷಧಾರಿ ಸ್ವಯಂ ಸೇವಕರಿಂದ ಪಥಸಂಚಲನ ನಡೆಯಲಿದೆ. ಅಂದು ಸಂಜೆ 4.15ಕ್ಕೆ ನಗರದ ಭಾರತ ಹೈಸ್ಕೂಲ್ ಮೈದಾನದಿಂದ ಆರಂಭವಾಗುವ ಪಥಸಂಚಲನ ಎರಡು ಮಾರ್ಗಗಳಲ್ಲಿ ಸಾಗಿ ಕೆಸಿಸಿ ಬ್ಯಾಂಕ್ ವೃತ್ತದಲ್ಲಿ ಸಂಗಮವಾಗಲಿದೆ.
ಮೊದಲ ಮಾರ್ಗವು ಭಾರತ ಹೈಸ್ಕೂಲ್ ಮೈದಾನ, ರೀಗಲ್ ವೃತ್ತ, ಸೂಪರ್ ಮಾರ್ಕೆಟ್ ರಸ್ತೆ, ಗಾಂಧಿಚೌಕ್, ಹೆಬ್ಬಳ್ಳಿ ಅಗಸಿ, ಮಂಗಳವಾರಪೇಟೆ, ಮಟ್ಟಿಪರಪ್ಪನಕೂಟ, ಕಾಮನಕಟ್ಟಿ, ಗಾಂಧಿಚೌಕ, ಕೆಸಿಸಿ ಬ್ಯಾಂಕ್ ಸರ್ಕಲ್, ವೀರೇಂದ್ರ ಡ್ರೆಸ್‌ಲ್ಯಾಂಡ್ ಮಾರ್ಗವಾಗಿ ಭಾರತ ಹೈಸ್ಕೂಲ್‌ನಲ್ಲಿ ಮುಕ್ತಾಯವಾಗಲಿದೆ. 2ನೇ ಮಾರ್ಗವು ಭಾರತ ಹೈಸ್ಕೂಲ್ ಮೈದಾನ, ರೀಗಲ್ ವೃತ್ತ, ಮಹಾರಾಣ ಪ್ರತಾಪ ವೃತ್ತ, ಜುಬಿಲಿ ವೃತ್ತ, ಕಾರ್ಪೊರೇಶನ್, ಹಳೇ ಬಸ್ ನಿಲ್ದಾಣ, ವಿವೇಕಾನಂದ ವೃತ್ತ, ಟಿಕಾರೆ ರಸ್ತೆ, ಭೂಸಪ್ಪ ಚೌಕ, ಕೆಸಿಸಿ ಬ್ಯಾಂಕ್ ಸರ್ಕಲ್, ವೀರೇಂದ್ರ ಡ್ರೆಸ್‌ಲ್ಯಾಂಡ್ ಮಾರ್ಗವಾಗಿ ಭಾರತ ಹೈಸ್ಕೂಲ್‌ನಲ್ಲಿ ಮುಕ್ತಾಯವಾಗಲಿದೆ.
ಸಂಚಲನದ ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಿಂದ ಶಾರೀರಿಕ ಪ್ರದರ್ಶನ ನಡೆಯಲಿದೆ. ಅತಿಥಿಯಾಗಿ ನಗರದ ವೈದ್ಯ ಚಿರಾಯು ಆಸ್ಪತ್ರೆಯ ಡಾ. ಪ್ರೀತಂ ಹುರಕಡ್ಲಿ, ವಕ್ತಾರರಾಗಿ ಕರ್ನಾಟಕ ಉತ್ತರ ಪ್ರಾಂತ ಶಾರೀರಿಕ ಪ್ರಮುಖ ನಾಗೇಶ ಚಿನ್ನಾರೆಡ್ಡಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net