ಆರ್ ಎಸ್ಎಸ್ ಪಥಸಂಚಲನ

Published on

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಮಹಾನಗರ ಟಕದ ವತಿಯಿಂದ ವಿಜಯದಶಮಿ ನಿಮಿತ್ತ ಪಥಸಂಚಲನ ಕಾರ್ಯಕ್ರಮವನ್ನು ಅ. 29ರಂದು ಮಧ್ಯಾಹ್ನ 2.30ಕ್ಕೆ ಹಮ್ಮಿಕೊಳ್ಳಲಾಗಿದೆ.

ದಿವ್ಯಾಂಗ ಚೇತನ ಕ್ರೀಡಾಪಟುಗಳ ರಾಷ್ಟ್ರೀಯ ತರಬೇತುದಾರ ಶಿವಾನಂದ ಗುಂಜಾಳ ಮುಖ್ಯಅತಿಥಿಯಾಗಿ ಪಾಲ್ಗೊಳ್ಳುವರು. ಆರ್ಎಸ್ಎಸ್ ಪ್ರಾಂತ ಸಂಪರ್ಕ ಪ್ರಮುಖ ಸುಧೀರಸಿಂಗ್ ಘೋರ್ಪಡೆ ಬೌದ್ಧಿಕ ನಡೆಸಿಕೊಡುವರು.

ಪಥ ಸಂಚಲನದಲ್ಲಿ ಭಾಗವಹಿಸುವವರು ದಂಡ ಸಹಿತ ರ್ಪೂಣ ಗಣವೇಷದಲ್ಲಿ ಮಧ್ಯಾಹ್ನ 2.30ಕ್ಕೆ ನೆಹರು ಮೈದಾನಕ್ಕೆ ಬರಬೇಕು. ಸಂಜೆ 5.15ಕ್ಕೆ ಸಾರ್ವಜನಿಕ ಸಮಾರಂಭ ನಡೆಯಲಿದೆ ಎಂದು ಮಹಾನಗರ ಸಂಘಚಾಲಕ ಶಿವಾನಂದ ಆವಟಿ ತಿಳಿಸಿದ್ದಾರೆ.

ಪಥಸಂಚಲನ ಮಾರ್ಗ: ನೆಹರು ಮೈದಾನ, ಕೃಷ್ಣ ಭವನ, ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನ ಪೇಟೆ, ತುಳಜಾಭವಾನಿ ವೃತ್ತ, ಪೆಂಡಾರ ಗಲ್ಲಿ, ಶಂಕರ ಮಠ, ಕಂಚಗಾರ ಗಲ್ಲಿ, ಹಿರೇಪೇಟೆ, ಸರಾಫ್ ಗಟ್ಟಿ ವೃತ್ತ, ಜವಳಿ ಸಾಲ, ಬೆಳಗಾವಿ ಗಲ್ಲಿ, ದುರ್ಗದ ಬೈಲ್ ವೃತ್ತದಲ್ಲಿ ಸಂಗಮವಾಗುವವು.

ಮಾರ್ಗ 2: ನೆಹರು ಮೈದಾನ, ಟೌನ್ ಹಾಲ್, ಜೆ.ಸಿ. ನಗರ, ಶಕ್ತಿ ರಸ್ತೆ, ಸ್ಟೇಶನ್ ರಸ್ತೆ, ಗಣೇಶ ಪೇಟೆ ವೃತ್ತ, ಸಿಬಿಟಿ, ಮಕಾನದಾರ ಗಲ್ಲಿ, ಮಂಗಳವಾರ ಪೇಟೆ, ಇಟಗಿ ಮಾರುತಿ ಗಲ್ಲಿ, ರಾಧಾಕೃಷ್ಣ ಗಲ್ಲಿ, ದುರ್ಗದ ಬೈಲ್ ವೃತ್ತದಲ್ಲಿ ಎರಡೂ ಸಂಚಲನಗಳು ಸಂಗಮಗೊಂಡು ಒಟ್ಟಿಗೆ ಬ್ರಾಡವೇ, ಶಿವಾಜಿ ವೃತ್ತ, ಕೊಪ್ಪಿಕರ ರಸ್ತೆ, ಕೃಷ್ಣ ಭವನ ಮಾರ್ಗವಾಗಿ ನೆಹರು ಮೈದಾನದಲ್ಲಿ ಸಮಾರೋಪಗೊಳ್ಳುವುದು.

ಪಥಸಂಚಲನ ಮಾರ್ಗದುದ್ದಕ್ಕೂ ಸಾರ್ವಜನಿಕರು ಮನೆ ಮುಂದೆ ರಂಗೋಲಿಯಿಂದ ಅಲಂಕರಿಸಿ ಭಗವಾ ಧ್ವಜಕ್ಕೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಬೇಕು. ಮಹಾಪುರುಷರ ಭಾವಚಿತ್ರ ಇರಿಸಿ, ಮಕ್ಕಳಿಗೆ ಮಹಾಪುರುಷರ ವೇಷ ಹಾಕಿಸಿ, ಪ್ರಮುಖ ವೃತ್ತಗಳಲ್ಲಿ ನಿಲ್ಲಿಸಿ ರಾಷ್ಟ್ರ ಪ್ರೇಮ ಮೆರೆಯಬೇಕೆಂದು ಸಂಟಕರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net