ಭಾರತ ದೇಶದ ಪ್ರಗತಿಗೆ ಆರೆಸ್ಸೆಸ್ ಅಗತ್ಯ

6
RSS is necessary for India's progress
Published on

ತೆಲಸಂಗ: ಭಾರತದಲ್ಲಿ ಆರೆಸ್ಸೆಸ್ ಸಂಘಟನೆ ಇಲ್ಲದಿದ್ದರೆ ದೇಶವನ್ನು ಕಲ್ಪಿಸಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಹೀಗಾಗಿ, ದೇಶಕ್ಕೆ ಆರ್‌ಎಸ್‌ಎಸ್ ಅಗತ್ಯವಾಗಿದೆ ಎಂದು ಆರೆಸ್ಸೆಸ್ ಮುಖ್ಯ ವಕ್ತಾರ ಅರವಿಂದರಾವ್ ದೇಶಪಾಂಡೆ ಹೇಳಿದರು.

ಇಲ್ಲಿನ ಬಿವಿವಿ ಸಂಘದ ಮೈದಾನದಲ್ಲಿ ವಿಜಯದಶಮಿ ಉತ್ಸವ ನಿಮಿತ್ತ ಸ್ಥಳೀಯ ಆರ್‌ಎಸ್‌ಎಸ್ ಶಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ದೇಶದ ಹಿರಿಮೆ ಹೆಚ್ಚುತ್ತಿದ್ದು, ಭಾರತ ವಿಶ್ವಗುರು ಎಂದು ಸಾಬೀತಾಗುವಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಪಾತ್ರ ಪ್ರಮುಖವಾಗಿದೆ. ಅಂಥ ಮಹಾನ್ ವ್ಯಕ್ತಿಗೆ ಆರೆಸ್ಸೆಸ್ ಸಂಸ್ಕಾರ ಪ್ರೇರಣೆಯಾಗಿದೆ ಎಂದರು.

ಶಿವಾಜಿ ಜನಿಸದಿದ್ದರೆ ಹಿಂದುಗಳೇ ಇರುತ್ತಿರಲಿಲ್ಲ. ಸಂಘ ಉದಯಿಸದೆ ಇದ್ದಿದ್ದರೆ ಬಾಂಗ್ಲಾ, ಪಾಕಿಸ್ತಾನದಲ್ಲಿನ ಹಿಂದುಗಳ ಸ್ಥಿತಿ ಭಾರತೀಯ ಹಿಂದುಗಳಿಗೂ ಎದುರಾಗುತ್ತಿತ್ತು. ಮತಾಂತರ ತಡೆಗಟ್ಟುವಲ್ಲಿ ನಾವೆಲ್ಲರೂ ಹೋರಾಡೋಣ. ದೇಶದ ಒಳಗೆ ಮತ್ತು ಹೊರಗೆ ಸವಾಲುಗಳನ್ನು ಮೆಟ್ಟಿ ನಿಂತು ಸಂಘ ದೇಶದ ರಕ್ಷಣೆಯಲ್ಲಿ ತೊಡಗಿದೆ ಎಂದರು.

ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಬಸಲಿಂಗಪ್ಪ ಗಂಗಾಧರ ಮಾತನಾಡಿ, ದೇಶದ ಏಳಿಗೆಯಲ್ಲಿ ಆರೆಸ್ಸೆಸ್ ಪಾತ್ರ ಪ್ರಮುಖವಾಗಿದೆ. ದೇಶ, ಧರ್ಮ ಉಳಿದರೆ ನೆಮ್ಮದಿ ಬದುಕು ಸಾಧ್ಯವಾಗುತ್ತದೆ ಎಂದರು.

ಸಂತೋಷ ಕುಲಕರ್ಣಿ, ಕೇಶವ ಉಂಡೋಡಿ, ಸಂಜೀವ್ ನಿರ್ವಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net