ಶತಮಾನೋತ್ಸವ ಸಂಭ್ರಮದಲ್ಲಿದೆ ಆರೆಸ್ಸೆಸ್

Upp_RSS
Published on

ಉಪ್ಪಿನಂಗಡಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಸಕ್ತ ಶತಮಾನೋತ್ಸವ ಸಂಭ್ರಮದಲ್ಲಿದೆ. ದೇಶದ ಮಹಾನ್ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ವರ್ಷವೂ ಆಗಿದ್ದು, ಈ ಸುಸಂಧರ್ಭದಲ್ಲಿ ಪ್ರತಿಷ್ಠಿತ ಸಹಕಾರಿ ಸಂಘದ ಚುಕ್ಕಾಣಿ ಹಿಡಿದ ಸುನೀಲ್ ಕುಮಾರ್ ದಡ್ಡು ಹಾಗೂ ದಯಾನಂದ ಸರೋಳಿ ಸಂಘವನ್ನು ಇನ್ನಷ್ಟು ಉನ್ನತಿಗೆ ಕೊಂಡೊಯ್ಯಲು ಸಾಧ್ಯವಾಗಲಿ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು. ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಅಧ್ಯಕ್ಷರಾಗಿ ಸುನೀಲ್ ಕುಮಾರ್ ದಡ್ಡು ಹಾಗೂ ಉಪಾಧ್ಯಕ್ಷರಾಗಿ ದಯಾನಂದ ಸರೋಳಿ ಶನಿವಾರ ಅಧಿಕಾರ ಸ್ವೀಕರಿಸಿದರು. ಮುಖಂಡ ಅಪ್ಪಯ್ಯ ಮಣಿಯಾಣಿ, ಸಂಘದ ಪೂರ್ವಧ್ಯಕ್ಷರಾದ ಪೆಲಪ್ಪಾರು ವೆಂಕಟರಮಣ ಭಟ್, ಚಂದ್ರಶೇಖರ್ ತಾಳ್ತಜೆ, ಕೆ.ಜಿ.ಭಟ್, ಯಶವಂತ ಜಿ., ಕೆ.ವಿ.ಪ್ರಸಾದ್, ನಿರ್ದೇಶಕರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉಷಾ ಮುಳಿಯ, ರಾಜೇಶ್, ಶ್ರೀರಾಮ ಪಾತಾಳ, ಗೀತಾ, ಸಂಧ್ಯಾ, ರಾಘವ ನಾಯ್ಕ, ವಸಂತ ಪಿಜಕ್ಕಳ, ಸುಂದರ್ ಕೆ., ಸದಾನಂದ ಶೆಟ್ಟಿ ಪ್ರಮುಖರಾದ ಹರಿರಾಮಚಂದ್ರ, ರವೀಂದ್ರ ಆಚಾರ್ಯ, ತಿಮ್ಮಪ್ಪ ಗೌಡ, ಕಂಗ್ವೆ ವಿಶ್ವನಾಥ ಶೆಟ್ಟಿ, ಪ್ರಸಾದ್ ಭಂಡಾರಿ, ಶ್ಯಾಮಲಾ ಶೆಣೈ, ಶೌಕತ್ ಅಲಿ, ಯತೀಶ್ ಶೆಟ್ಟಿ, ಅಜೀಜ್ ಬಸ್ತಿಕಾರ್, ರವೀಂದ್ರ ದರ್ಬೆ, ಎ.ಗೋಪಾಲ ಹೆಗ್ಡೆ, ಫಾರೂಕ್ ಜಿಂದಗಿ, ಪ್ರಶಾಂತ್ ಪೆರಿಯಡ್ಕ, ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ಸುಜಾತ ರೈ, ಸದಾನಂದ ಶೆಟ್ಟಿ, ವಿಜಯ ಕುಮಾರ್ ಕಲ್ಲಳಿಕೆ, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ.ಉಪಸ್ಥಿತರಿದ್ದರು.

ನಾನು ಇದನ್ನು ಹೊಣೆಗಾರಿಕೆ ಸ್ವೀಕರಿಸಿದ್ದೇನೆ ಎಂಬ ಭಾವದಿಂದ ಕರ್ತವ್ಯ ಬದ್ಧನಾಗಿರುತ್ತೇನೆ. ಸಹಕಾರಿ ಸಂಘ ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ಎಲ್ಲ ಪೂರ್ವಾಧ್ಯಕ್ಷರುಗಳ ಸಲಹೆ ಸೂಚನೆ ಪಡೆದು ಎಲ್ಲರ ಒಳಿತಿಗಾಗಿ ಶ್ರಮಿಸುತ್ತೇನೆ. ಸುನೀಲ್ ಕುಮಾರ್ ದಡ್ಡು, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net