ಬೆಳಗಾವಿಗೆ ಆಗಮಿಸಿದ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ ಭಾಗವತ್

IMG-20240731-WA0027.jpg
Published on

ಬೆಳಗಾವಿ: ಇಲ್ಲಿನ ಹಿಂದವಾಡಿಯ ಗುರುದೇವ ರಾನಡೆ ಮಂದಿರದ ಶತಮಾನೋತ್ಸವ ಪ್ರಯುಕ್ತ ಆ.1ರಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬುಧವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸರಸಂಘ ಚಾಲಕ ಡಾ.ಮೋಹನ ಭಾಗವತ್ ನಗರಕ್ಕೆ ಆಗಮಿಸಿದರು.

ಮಹಾರಾಷ್ಟ್ರದ ನಾಗ್ಪರದಿಂದ ವಿಶೇಷ ವಿಮಾನದಲ್ಲಿ ಬುಧವಾರ ರಾತ್ರಿ ಬೆಳಗಾವಿ ನಗರಕ್ಕೆ ಆಗಮಿಸಿದ ಡಾ.ಮೋಹನ್ ಭಾಗವತ್ ಅವರನ್ನು ಆರ್‌ಎಸ್‌ಎಸ್‌ನ ಪ್ರಾಂತಿಯ ಸಂಚಾಲಕರು, ಸ್ಥಳೀಯ ಮುಖಂಡರು ಇತರರು ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಬಿಗಿ ಪೊಲೀಸ್ ಭದ್ರತೆಯಲ್ಲಿ ನಗರಕ್ಕೆ ಆಗಮಿಸಿದ ಅವರು ನೇರವಾಗಿ ಆರ್‌ಎಸ್‌ಎಸ್ ಕಚೇರಿಗೆ ಆಗಮಿಸಿದರು.

ಆ.1ರಂದು ಬೆಳಗ್ಗೆ 10ಗಂಟೆಗೆ ಹಿಂದವಾಡಿಯ ಗುರುದೇವ ಮಂದಿರದಲ್ಲಿ ದಾಸಭೋಧ ಆರತಿ, ವಚನ ಕಾರ್ಯಕ್ರಮಗಳು ಜರುಗಲಿವೆ. ಬಳಿಕ ಸಂಜೆ 4 ಗಂಟೆಗೆ ಆರ್‌ಪಿಡಿ ಕಾಲೇಜು ರಸ್ತೆಯ ಕರ್ನಾಟಕ ಲಾ ಸೊಸೈಟಿಯ ಕೆ.ಕೆ.ವೇಣುಗೋಪಾಲ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಶತಮಾನೋತ್ಸವ ಕಾರ್ಯಕ್ರಮವನ್ನು ಆರ್‌ಎಸ್‌ಎಸ್ ಸರಸಂಘ ಚಾಲಕ ಡಾ.ಮೋಹನ ಭಾಗವತ್ ಉದ್ಘಾಟಿಸಲಿದ್ದಾರೆ. ಹೈದ್ರಾಬಾದ್‌ನ ಶ್ರೀರಾಮಚಂದ್ರ ಮಿಷನ್ ಕಮಲೇಶ ಪಟೇಲ್ ಅವರು ಪುಟ್ ಪ್ರಿಂಟ್ ಆನ್ ದಿನ ಸ್ಯಾಂಡ್ಸ್ ಆಫ್ ಟೈಮ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net