ರಾಷ್ಟ್ರಾಭಿಮಾನ ಬೆಳೆಸುವ ಆರ್‌ಎಸ್‌ಎಸ್

11Rayabag2
Published on

ರಾಯಬಾಗ: ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದ ಪ್ರತಿಯೊಬ್ಬ ಭಾರತೀಯನಲ್ಲಿ ರಾಷ್ಟ್ರಾಭಿಮಾನ ಬೆಳೆಸುವ ಸಂಘಟನೆ ಎಂದು ಚಿಕ್ಕೋಡಿ ಜಿಲ್ಲಾ ಆರ್‌ಎಸ್‌ಎಸ್ ಸಂಚಾಲಕ ಸಂಜಯ ಅಡಿಕೆ ಹೇಳಿದರು.

ಪಟ್ಟಣದ ಮಹಾವೀರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಶನಿವಾರ ಆರ್‌ಎಸ್‌ಎಸ್‌ನಿಂದ ಹಮ್ಮಿಕೊಂಡಿದ್ದ ವಿಜಯ ದಶಮಿ ಉತ್ಸವ ಹಾಗೂ ಆರ್‌ಎಸ್‌ಎಸ್ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿ, ಆರ್‌ಎಸ್‌ಎಸ್ ರಾಷ್ಟ್ರದ ನಾಗರಿಕರಲ್ಲಿ ರಾಷ್ಟ್ರೀಯ ಮನೋಭಾವ ಬೆಳೆಸುವ ಮತ್ತು ಶಿಸ್ತಿನ ಸಂಘವಾಗಿದೆ ಎಂದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಗಣವೇಷಧಾರಿಗಳ ಪಥ ಸಂಚಲನ ನಡೆಯಿತು.

ಶಾಸಕ ಡಿ.ಎಂ.ಐಹೊಳೆ, ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ, ಮಾಜಿ ಶಾಸಕ ಪಿ.ರಾಜೀವ, ಭರತೇಶ ಬನವಣೆ, ಸದಾಶಿವ ದೇಶಿಂಗೆ, ವೆಂಕಟೇಶ ದೇಶಪಾಂಡೆ, ಅಣ್ಣಾಸಾಹೇಬ ಕುಲಗುಡೆ, ಸದಾನಂದ ಹಳಿಂಗಳಿ, ಪ್ರಭಾಕರ ಪುರಾಣಿಕ, ಅಶೋಕ ಅಂಗಡಿ, ಪೃಥ್ವಿರಾಜ ಜಾಧವ, ಸತ್ಯಕುಮಾರ ಬಿರಾಜ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net