ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್- ಮಾದಾರಶ್ರೀಗಳ ಭೇಟಿ, ಸ್ವಯಂಸೇವಕರ ಜತೆಗೂ ಮಾತುಕತೆ..

RSS
Published on

ಚಿತ್ರದುರ್ಗ: ಕೆಲವೇ ದಿನಗಳ ಹಿಂದೆ ರಾಜ್ಯದ ಭೀಮಾತೀರದಲ್ಲಿ ಕಾಣಿಸಿಕೊಂಡಿದ್ದ ಆರ್​ಎಸ್​ಎಸ್​ ಸರಸಂಘಚಾಲಕ ಮೋಹನ್ ಭಾಗವತ್ ಅವರು ಇಂದು ಚಿತ್ರದುರ್ಗದಲ್ಲಿ ಮಾದಾರಶ್ರೀಗಳನ್ನು ಭೇಟಿಯಾಗಿದ್ದಲ್ಲದೆ, ಆರ್​ಎಸ್​ಎಸ್​ ಮುಖಂಡರ ಜತೆಗೂ ಮಾತುಕತೆ ನಡೆಸಿದ್ದಾರೆ.

ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳೊಂದಿಗೆ ಇಂದು ಶಿವಶರಣ ಮಾದಾರ ಚನ್ನಯ್ಯ ಸ್ವಾಮಿ ಮಠಕ್ಕೆ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಅವರು, ಸ್ವಾಮೀಜಿ ಮಾತ್ರವಲ್ಲದೆ ಆರ್​ಎಸ್​ಎಸ್​ ಮುಖಂಡರೊಂದಿಗೂ ಮಾತುಕತೆ ನಡೆಸಿದರು.

ಮಾದಾರ ಚನ್ನಯ್ಯ ಶ್ರೀಗಳನ್ನು ಕುಂಭಮೇಳದಲ್ಲಿ ಭೇಟಿ ಆಗಿದ್ದೆ. ಕೋವಿಡ್ ಕಾರಣದಿಂದ ಮಠಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಜನವರಿಯಲ್ಲಿ ಮಠಕ್ಕೆ ಬರಬೇಕೆಂದು ಅಂದುಕೊಂಡಿದ್ದೆ, ಆಗಲೂ ಆಗಿರಲಿಲ್ಲ. ಆದರೆ ಈಗ ಭೇಟಿ ನೀಡಿದ್ದು, ಎಲ್ಲರನ್ನೂ ಮಾತನಾಡಿಸಿದ್ದು ಖುಷಿ ನೀಡಿದೆ ಎಂದು ಮೋಹನ್ ಭಾಗವತ್ ತಿಳಿಸಿದರು. ಜಿಲ್ಲೆಯ ಸುತ್ತ-ಮುತ್ತಲ ಮಠಾಧೀಶರೊಂದಿಗೆ ಮಂಗಳವಾರ ಸಮಾಲೋಚನಾ ಸಭೆಯಲ್ಲಿ ಭಾಗವತ್ ಪಾಲ್ಗೊಳ್ಳಲಿದ್ದಾರೆ ಎಂದು ಮಠದ ಸಿಬ್ಬಂದಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net