ಆರ್​ಎಸ್​ಎಸ್​ ಶತಮಾನೋತ್ಸವ ಸಂಭ್ರಮ

RSS
Published on

ಕೋಲಾರ: ರಾಷ್ಟ್ರೀಯ ಸ್ವಯಂ ಸೇವಕ ಸಂ (ಆರ್​ಎಸ್​ಎಸ್​) ಸ್ಥಾಪನೆಯಾಗಿ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಭಾನವಾರ ಸಾವಿರಾರು ಸ್ವಯಂ ಸೇವಕರ ನೇತೃತ್ವದಲ್ಲಿ 16 ಕಿಮೀ ಪಥ ಸಂಚಲನ ನಡೆಸಲಾಯಿತು.

ತಾಲೂಕಿನ ವಕ್ಕಲೇರಿ ಸಮೀಪ ಮಧ್ಯಾಹ್ನ 2.30ಕ್ಕೆ ಆರಂಭವಾದ ಯಾತ್ರೆಗೆ ದಣ ಪ್ರಾಂತ ಪ್ರಚಾರಕ್​ ಗುರುಪ್ರಸಾದ್​, ವಿಭಾಗೀಯ ಸಂಚಾಲಕ್​ ಡಾ.ಶಂಕರ್​ ನಾಯಕ್​ ಚಾಲನೆ ನೀಡಿದರು.

ಪಥ ಸಂಚನಲದಲ್ಲಿ ಸುಮಾರು 2,000ಕ್ಕೂ ಹೆಚ್ಚು ಸೇವಕರು ಪಾಲ್ಗೊಂಡಿದ್ದರು. ಮಾರ್ಗ ಮಧ್ಯದ ಗ್ರಾಮಗಳಲ್ಲಿ ಯುವಕರು ಭಾರತ ಮಾತೆಗೆ ಪೂಜೆ ಸಲ್ಲಿಸಿ, ಸಂಟಕರಿಗೆ ಹೂವಿನ ಮಳೆ ಸುರಿದು ಸ್ವಾಗತ ಕೋರಿದರು.

ರಾತ್ರಿ 8ಕ್ಕೆ ಕೋಲಾರ ನಗರ ಪ್ರವೇಶಿಸಿದ ಸ್ವಯಂ ಸೇವಕರ ನಡಿಗೆ ಜೂನಿಯರ್​ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡಿತು.

ಪಥ ಸಂಚಲನದ ಮಾರ್ಗ ಮಧ್ಯದಲ್ಲಿ ಮೂರು ಕಡೆ ವಿಶ್ರಾಂತಿ ಕೇಂದ್ರ ಸ್ಥಾಪನೆ ಮಾಡಲಾಗಿತ್ತು. ತಾಲೂಕಿನ ಬೆಟ್ಟಬೆಣಜೇನಹಳ್ಳಿಯಲ್ಲಿ ನೀರು, ಸೌತೆಕಾಯಿ, ಮಂಗಸಂದ್ರ ಪಿಜಿ ಸೆಂಟರ್​ನಲ್ಲಿ ಬನ್​, ನೀರು, ಅಮ್ಮೇರಹಳ್ಳಿ ಸಿಎಂಆರ್​ ಕಲ್ಯಾಣ ಮಂಟಪದಲ್ಲಿ ಬಾಳೆಹಣ್ಣು, ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆರೋಗ್ಯ ಸಮಸ್ಯೆ ಎದುರಾದರೆ ತುರ್ತು ಚಿಕಿತ್ಸೆಗಾಗಿ ವೈದ್ಯರ ತಂಡವೂ ನೇಮಿಸಲಾಗಿತ್ತು.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಆಗಮಿಸಿದ್ದ ಕಾರ್ಯಕರ್ತರು ತಂಡಗಳನ್ನಾಗಿ ವಿಭಜಿಸಿಕೊಂಡು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಬ್ಯಾಂಡ್​ ಸೆಟ್​ ತಂಡ ಸಾಥ್​ ನೀಡಿತು. ಮಾಜಿ ಸಚಿವ ನಂದೀಶ್​ರೆಡ್ಡಿ, ದೊಡ್ಡಬಳ್ಳಾಪುರ ಶಾಸಕ ಮುನಿರಾಜು, ಮಾಜಿ ಸಂಸದ ಎಸ್​.ಮುನಿಸ್ವಾಮಿ ಸೇರಿ ಮತ್ತೀತರ ಪ್ರಮುಖರು ಪಾಲ್ಗೊಂಡಿದ್ದರು.

1,800 ಪೊಲೀಸರ ಭದ್ರತೆ

ಪಥ ಸಂಚಲನ ನಗರದ ಕ್ಲಾಕ್​ ಟವರ್​ ಮೂಲಕ ಹಾದು ಹೋಗದಂತೆ ಜಿಲ್ಲಾಡಳಿತದಿಂದ ನಿಷೇಧಾೆ ಜಾರಿ ಮಾಡಿತ್ತು. ಆದರೆ, ಸಂಟಕರು ನ್ಯಾಯಾಲಯ ಮೋರೆ ಹೋಗಿ, ಕ್ಲಾಕ್​ ಟವರ್​ ಮೂಲಕವೇ ಮೆರವಣಿಗೆ ತೆರಳಲು ಅನುಮತಿ ಪಡೆದುಕೊಂಡರು. ಆ ಹಿನ್ನೆಲೆಯಲ್ಲಿ ಪೊಲೀಸ್​ ಇಲಾಖೆಯಿಂದ ಎಸ್ಪಿ ಬಿ.ನಿಖಿಲ್​ ನೇತೃತ್ವದಲ್ಲಿ ಎಪಿಎಂಸಿಯಿಂದ ನಗರಾದ್ಯಂತ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.

ನಿಷೇಧಾಜ್ಞೆ ಜಾರಿ

ನಗರದ ಪಲ್ಲವಿ ವೃತ್ತದಿಂದ ಆರಂಭಗೊಂಡು ತ್ರಿಕೋನ ವೃತ್ತ, ಗಡಿಯಾರ ಗೋಪುರ, ಶಾಹಿನ್​ ಷಾ ನಗರ ಪ್ರವೇಶ ದ್ವಾರ, ಈದ್ಗಾ ಮೈದಾನ ಪ್ರದೇಶ, ಸಾಗರ್​ ಹೋಟೆಲ್​ ಮಾರ್ಗವಾಗಿ ಮಾಲೂರು ಜಿಗ್​ಜಾಗ್​ವರೆಗಿನ ಪ್ರದೇಶ, ಸಂಚಾರಿ ಪೊಲೀಸ್​ ಠಾಣೆ ಜಂನ್​, ಶಾರದಾ ಟಾಕೀಸ್​ ಜಂನ್​ ಹಾಗೂ ದೊಡ್ಡಪೇಟೆ ರಸ್ತೆ ಪ್ರದೇಶಗಳಲ್ಲಿ 144 ರನ್ವಯ ನಿಷೇಧಾೆ ಜಾರಿ ಮಾಡಿ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಆದೇಶಿಸಿದ್ದರು.

ನ್ಯಾಯಲಯ ತಡೆ

ಹಲವು ಶಾಂತಿ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ದೀರ್ ಪಥ ಸಂಚಲನವು ನಗರದಲ್ಲಿ ನಿಷೇಧಾೆ ಹೇರಿರುವ ಪ್ರದೇಶ ಹೊರತುಪಡಿಸಿ ಮಾರ್ಗ ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಲಾಗಿತ್ತು. ಅಂತೆಯೇ, ಸಂಚಲನವು ಟೇಕಲ್​ ಕ್ರಾಸ್​ನಿಂದ ಟೇಕಲ್​ ಮುಖ್ಯರಸ್ತೆ ತಿರುವು ಪಡೆದು ಜಯನಗರ, ಟೇಕಲ್​ ಜಿಗ್​ಜಾಗ್​ ಎನ್​ಎಚ್​&75 ಸರ್ವೀಸ್​ ರಸ್ತೆ ಮೂಲಕ ಮಾಲೂರು ಜಿಗ್​ಜಾಗ್​ನಿಂದ ಒಕ್ಕಲೇರಿ ರಸ್ತೆ ಮೂಲಕ ಹಾದುಹೋಗಲು ಅನುಮತಿಸಲಾಗಿತ್ತು. ಆದರೆ, ಸಂಟಕರು ನ್ಯಾಯಾಲಯ ಮೊರೆ ಹೋಗಿದ್ದರಿಂದ ಅಂದುಕೊಂಡ ಮಾರ್ಗದಲ್ಲೇ ಪಥಸಂಚಲನ ಸಂಚರಿಸಿದರು. ಅಂತಿಮವಾಗಿ ದೊಡ್ಡಪೇಟೆ, ಎಂ.ಜಿ.ರಸ್ತೆ ಮೂಲಕ ಸಾಗಿ ಜೂನಿಯರ್​ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡಿತು.

ಧರ್ಮ ರಕ್ಷಣೆ ಜವಾಬ್ದಾರಿ ಮರೆಯದಿರಿ

ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸ್ವಯಂ ಸೇವಕರು ಕೆಲಸ ಮಾಡಬೇಕು. ಧರ್ಮವನ್ನು ರಣೆ ಮಾಡುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಆರ್​ಎಸ್​ಎಸ್​ ದಣ ಪ್ರಾಂತ ಸಂಚಾಲಕ ಗುರುಪ್ರಸಾದ್​ ಹೇಳಿದರು.

ವಕ್ಕಲೇರಿಯಲ್ಲಿ ಪಥ ಸಂಚಲನ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ದ್ರೀ ಯಾತ್ರೆಗಾಗಿ ಒಟ್ಟಿಗೆ ಸೇರಿದ್ದೇವೆ. ಈ ಕಾರ್ಯ ಕಾರ್ಯಕರ್ತರ ಪ್ರಯತ್ನದಂತೆಯೇ ನಡೆಯುತ್ತಿದೆ. ಸಂ 100 ಪೂರೈಸಿ 101ನೇ ವರ್ಷಕ್ಕೆ ಕಾಲಿಟ್ಟಿದ್ದರ ಭಾಗವೇ ಈ ಪಥ ಸಂಚಲನ ಎಂದರು.

ಸಮಾಜದ ಕೆಲಸ ಮಾಡಲು ಶ್ರಮತೆ ಇರಬೇಕು. ಇದಕ್ಕೆ ಮನಸ್ಸು ದೃಢವಾಗಿರಬೇಕು, ಭವಿಷ್ಯದ ದೃಷ್ಟಿಯಿಂದ ಸಂಟನೆ ಕೆಲಸ ಮಾಡಬೇಕು ಎಂದು ತಿಳಿಸಿದರು.

ಹಿಂದು ರಾಷ್ಟ್ರದಲ್ಲಿ ಹಿಂದು ಧರ್ಮ, ಸಮಾಜ ರಣೆ ಸ್ವಯಂ ಸೇವಕನ ಧ್ಯೇಯವಾಗಿದೆ. ಇದರಿಂದಾಗಿ ನಾವೆಲ್ಲ ಸಂದ ಚಟುವಕೆಗಳಲ್ಲಿ ಭಾಗಿಯಾಗಿದ್ದೇವೆ, ಇದಕ್ಕೆ ಇನ್ನಷ್ಟು ಹೆಚ್ಚು ಸಮಯ ನೀಡಬೇಕಾಗಿದೆ. ಪ್ರತಿಯೊಬ್ಬರೂ ಕ್ರಿಯಾಶೀಲರಾಗಿ, ಸಮಾಜದ ಜಾಗೃತಿಗಾಗಿ ಕೆಲಸ ಮಾಡಬೇಕು. ಪ್ರತಿ ಗ್ರಾಮದಲ್ಲೂ ಶಾಖೆ ಪ್ರಾರಂಭಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಅಸ್ಪೃಶ್ಯತೆ ವಿರುದ್ಧ ಹೋರಾಟ

ಸಂವೂ ದೊಡ್ಡಮಟ್ಟದಲ್ಲಿ ಶಕ್ತಿಯಾಗಿ ಬೆಳೆಯಲು ಹಲವರ ಶ್ರಮವಿದೆ. ಧರ್ಮ ಉಳಿವೇ ನಮ್ಮ ಆಚರಣೆ. ಅಪೇೆಗೆ ತಕ್ಕಂತೆ ನಾವೆಲ್ಲ ಕೆಲಸ ಆಗಬೇಕು. ಅಸ್ಪೃಶ್ಯತೆಯ ವಿರುದ್ಧ ಹೋರಾಟ ಮಾಡಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು. ಸ್ವದೇಶಿ ಜೀವನ ಶೈಲಿ ಮೂಲಕ ಸಮಾಜ ನಿರ್ಮಾಣ ಮಾಡಬೇಕು. ಮುಂದಿನ ಬದಲಾವಣೆಗೆ ತಕ್ಕಂತೆ ಕೇಂದ್ರದಿಂದ ಬರುವ ಸೂಚನೆ ಪಾಲನೆ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ದಣ ಪ್ರಾಂತ ಸಂಚಾಲಕ ಗುರುಪ್ರಸಾದ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net