

ರಾಯಚೂರು ಆರ್‌ಎಸ್‌ಎಸ್ ರಾಜಕೀಯ ಪಕ್ಷವಲ್ಲ. ದೇಶದ ಸಂಘಟನೆ, ಶ್ರೇಷ್ಠತೆ ಸಾರುವಂತ ಸಂಸ್ಥೆಯಾಗಿದೆಂದು ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.
ಶ್ರೀಮಠದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆರ್‌ಎಸ್‌ಎಸ್ ಸಂಘವು ದೇಶದ ಜನರಲ್ಲಿ ದೇಶದ ಬಗ್ಗೆ ಅಭಿಮಾನ ಬೆಳೆಸುವ ಸಂಸ್ಥೆಯಾಗಿದೆ. ಸಂಘಕ್ಕೆ ಯಾವುದೇ ನಿರ್ಬಂಧ ,ರಾಜಕೀಯ ಹಿನ್ನೆಲೆಯನ್ನು ಯಾರು ಕಟ್ಟಲು ಸಾಧ್ಯವಿಲ್ಲ. ಎಲ್ಲರಿಗೂ ವ್ಯಕ್ತಿ ಸ್ವಾತಂತ್ರ ಇದೆ. ಸಂವಿಧಾನದ ದತ್ತ ಅಧಿಕಾರವಿದೆ. ಆರ್‌ಎಸ್‌ಎಸ್‌ನಲ್ಲಿ ಪಾಲ್ಗೊಳ್ಳುವಂತದ್ದು ಅವರವರ ವ್ಯಕ್ತಿ ಸ್ವಾತಂತ್ರ್ಯವಾಗಿದೆ. ನಾವ್ಯಾರು ಹೋಗಬಾರದು ಎನ್ನುವುದು ಸಂವಿಧಾನ ವಿರೋಧಿಯಾಗುತ್ತದೆ. ಆರ್‌ಎಸ್‌ಎಸ್ ರಾಜಕೀಯ ಪಕ್ಷ ಅಲ್ಲ. ದೇಶ ದ್ರೋಹದ ಪಕ್ಷ ಅಲ್ಲಾ.ದೇಶದ ಭದ್ರತೆ, ಏಕತೆ ಸಾರುವ ಸಂಸ್ಥೆಯಾಗಿದೆ ಎಂದರು.
ಬಲಿಪಾಡ್ಯ ಹಿನ್ನಲೆ ಮೂಲ ರಾಮದೇವರ ವಿಶೇಷ ಪಂಚಾಮೃತ ಅಭಿಷೇಕದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದ್ದರು, ಅವರು ಯಾವುದೇ ವಿಶೇಷ ಕಾರಣ ಸಂಕಲ್ಪ ಕುರಿತು ನಮಗೆ ಮಾಹಿತಿ ನೀಡಿಲ್ಲ. ದಂಪತಿ ಸಹಿತರಾಗಿ ಬಂದು ರಾಯರ ದರ್ಶನ ಪಡೆದಿದ್ದಾರೆ. ಆಶಿರ್ವಾದ ಮಾಡಿದ್ದೇವೆ ಎಂದರು.