ಆರ್‌ಎಸ್‌ಎಸ್‌ನಿಂದ ಆಕರ್ಷಕ ಪಥಸಂಚಲನ

12dvk 9
Published on

ಬೆಳಗಾವಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಆಚರಣೆ ಹಾಗೂ ವಿಜಯ ದಶಮಿ ಪ್ರಯುಕ್ತ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಆಕರ್ಷಕ ಗಣವೇಷಧಾರಿಗಳ ಪಥಸಂಚಲನ ಕುಂದಾ ನಗರಿಯಲ್ಲಿ ರಾಷ್ಟ್ರ ಜಾಗೃತಿಯ ಕಂಪು ಹರಡಿತು.

ಆರ್‌ಎಸ್‌ಎಸ್ ನಗರ ಘಟಕದಿಂದ ಭಾನುವಾರ ಸಂಜೆ ಸರದಾರ್ಸ್‌ ಮೈದಾನದಿಂದ ಎರಡು ವಿಭಾಗಗಳಲ್ಲಿ ಹೊರಟ ಗಣವೇಷಧಾರಿಗಳ ದೇಶಪ್ರೇಮದ ಠೀವಿಯ ನಡಿಗೆ ವೀಕ್ಷಿಸಲು ಬೀದಿಯುದ್ದಕ್ಕು ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಅಲಲ್ಲಿ ರಂಗೋಲಿ ಹಾಕಿ ಸ್ವಾಗತಿಸಿಕೊಂಡರು. ಕೆಲವೆಡೇ ಬೀದಿಯುದ್ದಕ್ಕೂ ರತ್ನಗಂಬಳಿಯಂತೆ ಹೂವು ಹಾಕಲಾಗಿತ್ತು. ಕೆಲವೆಡೆ ಸ್ವಯಂ ಸೇವಕರ ಮೇಲೆ ಪುಷ್ಪವೃಷ್ಟಿಗೈದರು.ರಸ್ತೆ ಪಕ್ಕದಲ್ಲಿ ಭಾರತಮಾತೆ ಮತ್ತು ವಿವಿಧ ರಾಷ್ಟ್ರ ಪುರುಷರ ಮತ್ತು ವನಿತೆಯ ವೇಷದಲ್ಲಿ ಸ್ವಾಗತ ಕೋರಿದರು. ಪಥ ಸಂಚಲನದುದ್ದಕ್ಕೂ ಜೈ ಶ್ರೀರಾಮ, ಹರ ಹರ ಮಹಾದೇವ, ಭಾರತ ಮಾತಾ ಕೀ ಮತ್ತು ವಂದೇ ಮಾತರಂ ಘೋಷಣೆಗಳು ಮೊಳಗಿದವು.

ರಾಣಿ ಚನ್ನಮ್ಮ ವೃತ್ತ, ಚವಾಟ್‌ಗಲ್ಲಿ , ಬಡಕಲ್ ಗಲ್ಲಿ, ಶನಿವಾರ ಕೂಟ್, ಗಣಪತಿಗಲ್ಲಿ, ಶನಿಮಂದಿರ, ಕುಲಕರ್ಣಿ ಗಲ್ಲಿ ಮಾರ್ಗದಲ್ಲಿ ಒಂದು ತಂಡ ಹಾಗೂ ಲಿಂಗರಾಜ ವೃತ್ತ, ಕಾಕತಿ ವೇಸ್, ರಿಸಲ್ದಾರ ಗಲ್ಲಿ, ಗವಳಿ ಗಲ್ಲಿ, ಸಮಾದೇವಿ ಗಲ್ಲಿ, ಕಡೋಲಕರ ಗಲ್ಲಿ, ಮಾರುತಿಗಲ್ಲಿ, ಬಸವನಗಲ್ಲಿ ಮೂಲಕ ಮತ್ತೊಂದು ತಂಡ ಸಂಚರಿಸಿ, ಎರಡೂ ತಂಡಗಳು ಟಿಳಕ ವೃತ್ತದಲ್ಲಿ ಏಕಕಾಲಕ್ಕೆ ಸಮ್ಮಿಳಿತಗೊಂಡವು. ಈ ಸಂಗಮ ಕಣ್ತುಬ್ಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸಂಗಮಗೊಂಡ ಬಳಿಕ ರಾಮಲಿಂಗಖಿಂಡ ಗಲ್ಲಿ ಧರ್ಮವೀರ ಸಂಭಾಜಿ ವೃತ್ತ ಕಾಲೇಜುರಸ್ತೆ ಮೂಲಕ ಸಂಚರಿಸಿ ಲಿಂಗರಾಜ ಮೈದಾನದಲ್ಲಿ ಸಮಾರೋಪಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net