ರಂಗೋಲಿಯಲ್ಲಿ ಹೆಡಗೇವಾರ ಭಾವಚಿತ್ರ ಅನಾವರಣ

2dvk 4
Published on

ಬೆಳಗಾವಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನೋತ್ಸವ ಸಂಭ್ರಮದಲ್ಲಿರುವ ಹಿನ್ನೆಲೆ ನಗರದ ರಂಗೋಲಿ ಕಲಾವಿದ ಅಜಿತ ಔರವಾಡಕರ, ರಂಗೋಲಿಯಲ್ಲಿ ಸಂಘದ ಸಂಸ್ಥಾಪಕ ಕೇಶವ ಹೆಡಗೇವಾರರ ಭಾವಚಿತ್ರ ರಚಿಸಿದ್ದಾರೆ.

3 ಅಡಿ ಉದ್ದ, 2 ಅಡಿ ಎತ್ತರದ ಈ ರಂಗೋಲಿ ರಚನೆಗೆ ಕಲಾವಿದ ಅಜಿತ 11 ಗಂಟೆ ತೆಗೆದುಕೊಂಡಿದ್ದಾರೆ. ಈ ಅಪರೂಪದ ರಂಗೋಲಿಯನ್ನು ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿದ್ದು, ವಡಗಾವಿಯ ಜ್ಯೋತಿ ೆಟೋ ಸ್ಟುಡಿಯೋದಲ್ಲಿ ಅ. 8ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಸಾರ್ವಜನಿಕರು ವೀಕ್ಷಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net