

ಚಿತ್ರದುರ್ಗ: ಹಿಂದು ಮಹಾಗಣಪತಿ ಮುಕ್ತಿ ಬಾವುಟವನ್ನು 1.51 ಲಕ್ಷ ರೂಪಾಯಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಹರಾಜಿನಲ್ಲಿ ತಮ್ಮದಾಗಿಸಿಕೊಂಡರು. ಶೋಭಾಯಾತ್ರೆಗೆ ಮುನ್ನ ಉತ್ಸವ ಸಮಿತಿಯಿಂದ ಹಾರ, ಬಾವುಟ, ಹಣ್ಣಿನಬುಟ್ಟಿ, ದೇವಾಲಯದ ಮಾದರಿಗಳನ್ನು ಹರಾಜು ಹಾಕಲಾಯಿತು.
ಗುಲಾಬಿ ಹಾರ-45 ಸಾವಿರ ರೂ.(ಶಿವಾನಂದ), ಸೋಮನಾಥ ಮಂದಿರ ಮಾದರಿ-95 ಸಾವಿರ ರೂ.(ವೀರಶೈವ-ಲಿಂಗಾಯತ ಯುವ ವೇದಿಕೆ ನಗರಾಧ್ಯಕ್ಷ ಮಂಜುನಾಥ), ರಾಮಮಂದಿರ ಮಾದರಿ -1.05 ಲಕ್ಷ ರೂ. (ಪಿಯುಎಸ್‌ವಿ ಹರೀಶ್), ಗಣಪತಿ ಪೇಂಟಿಂಗ್-51 ಸಾವಿರ ರೂ.( ಬೆಸ್ಟ್ ಸ್ಟುಡಿಯೋದ ಧರ್ಮ), ಹಣ್ಣಿನಬುಟ್ಟಿ-25 ಸಾವಿರ ರೂ.(ಬಿವಿಕೆಎಸ್‌ನ ಕಾರ್ತಿಕ್), ರುದ್ರಾಕ್ಷಿ ಹಾರವನ್ನು 35 ಸಾವಿರ ರೂಪಾಯಿಗೆ ಓಂಕಾರಪ್ಪ ಪಡೆದರು.