ಮೊಬೈಲ್ ಹ್ಯಾಕ್ ಮಾಡಿ 6.91 ಲಕ್ಷ ರೂ. ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಮೊಬೈಲ್ ಹ್ಯಾಕ್ ಮಾಡಿ, ಆನ್ ಲೈನ್ ಮೂಲಕ 6.91 ಲಕ್ಷ ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 54 ವರ್ಷದ ದೂರುದಾರರು ಮೇ 4ರಂದು ಮೊಬೈಲ್ ಪರಿಶೀಲಿಸುತ್ತಿದ್ದ ವೇಳೆ ಹಣ ವರ್ಗಾವಣೆಯಾಗಿರುವ ಎಸ್ಸೆಮ್ಮೆಸ್ ಕಂಡು ಬಂದಿದೆ. ಈ ಬಗ್ಗೆ ಬ್ಯಾಂಕ್ ಆ್ಯಪ್ ಪರಿಶೀಲಿಸಿದಾಗ ಹಣ ವರ್ಗಾವಣೆಯಾಗಿರುವುದು ದೃಢಪಟ್ಟಿದೆ. ಈ ಬಗ್ಗೆ ಸೈಬರ್ ಸಹಾಯವಾಣಿಗೆ ದೂರು ನೀಡಿದ್ದಾರೆ.
ಬಳಿಕ ಕಾವೂರಿನ ಬ್ಯಾಂಕ್ ಗೆ ತೆರಳಿ ಸ್ಟೇಟ್ ಮೆಂಟ್ ತೆಗೆಸಿ ನೋಡಿದಾಗ ಮೇ 3ರಂದು ಹಂತ ಹಂತವಾಗಿ ಸುಮಾರು 3,76,620 ರೂ. ವರ್ಗಾವಣೆ ಆಗಿರುವುದು ಕಂಡು ಬಂದಿದೆ. ಕೂಳೂರಿನ ಇನ್ನೊಂದು ಬ್ಯಾಂಕ್ ಗೆ ತೆರಳಿ ಪರಿಶೀಲಿಸಿದಾಗ ಮೇ 3ರಂದೇ 3,14,914 ರೂ. ವಿವಿಧ ಖಾತೆಗೆಗಳಿಗೆ ವರ್ಗಾವಣೆ ಆಗಿರುವುದು ಕಂಡು ಬಂದಿದೆ. ಒಟ್ಟು 6,91,534 ರೂ. ವನ್ನು ಯಾರೋ ವಂಚಕರು ಮೊಬೈಲ್ ಹ್ಯಾಕ್ ಮಾಡಿ, ಆನ್ ಲೈನ್ ಮೂಲಕ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಹಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net