71ವರ್ಷದ ನಾಗರಿಕರೊಬ್ಬರಿಗೆ ನಿಮ್ಮ ಎಸ್‌ಐಆರ್ ಪರಿಶೀಲನೆಯು ಮಿಸ್ ಮ್ಯಾಚ್ ಆಗಿದೆ, ನೀವು ಈ ನಂಬರ್ ಸಂಪರ್ಕಿಸಬೇಕೆಂದು ದೂರುದಾರರ ಮೊಬೈಲ್ ನಂಬ್ರಕ್ಕೆ ಮೆಸೇಜ್ ಬಂದಿತ್ತು. ಅದರಂತೆ ಜು.18ರಂದು ವಾಟ್ಸಪ್ ಮೆಸೇಜ್ ಬಂದಿದ್ದು, ಅದಕ್ಕೆ ಆರೋಪಿಗಳು 48 ಗಂಟೆಯಲ್ಲಿ ಸಂಪರ್ಕಿಸುವುದಾಗಿ ಮೆಸೇಜ್ ಕಳುಹಿಸಿದ್ದಾರೆ. ಜು.20ರಂದು ಸಂಜೆ ಮೊಬೈಲ್ ನಂಬ್ರಕ್ಕೆ ವಾಟ್ಸಪ್‌ನಲ್ಲಿ ಲಿಂಕ್ ಬಂದಿದೆ. ಬಳಿಕ ವಾಟ್ಸಪ್ ಕರೆ ಬಂದಿದ್ದು, ನಿಮ್ಮ ಎಸ್‌ಐಆರ್ ಅಪ್ಡೇಟ್ ಮಾಡಿಕೊಡುತ್ತೇವೆ ಎಂದು ಹೇಳಿ ನಂಬಿಸಿ ದಾಖಲೆ ವಿವರ ಪಡೆದುಕೊಂಡಿದ್ದಾರೆ. ಬಳಿಕ ಎಪಿಕೆ ೈಲ್ ಡೌನ್ಲೋಡ್ ಮಾಡುವಂತೆ ಹೇಳಿದ್ದು, ಇದಾದ ಬಳಿಕ ಮೊಬೈಲ್ ನಿಷ್ಕ್ರಿಯಗೊಂಡಿದೆ. ಇದರಿಂದ ಸಂಶಯಗೊಂಡು ಬ್ಯಾಂಕ್ ಖಾತೆಯ ವಿವರವನ್ನು ಪರಿಶೀಲಿಸಿದಾಗ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಒಟ್ಟು 6,82,082ರೂ. ಕಡಿತಗೊಂಡಿರುತ್ತದೆ.