ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಕಾರ

oplus_0
oplus_0
Published on

ತುರುವೇಕೆರೆ: ಡೇರಿ ಕಟ್ಟಡ ನಿರ್ಮಾಣಕ್ಕೆ 6 ಲ ರೂ. ಒಕ್ಕೂಟದಿಂದ ನೀಡಲಾಗುತ್ತಿದೆ. ನಮ್ಮ ಒಕ್ಕೂಟ ನಿರಂತರವಾಗಿ ರೈತರ ಪರವಾಗಿ ಕೆಲಸ ಮಾಡುತ್ತಿದೆ. ರೈತರಿಗೆ ಉತ್ತಮ ಧರ ನೀಡಲಾಗುತ್ತಿದ್ದು, ತಾಲೂಕಿನಲ್ಲಿ 130 ಸಂಗಳಲ್ಲಿ ಸುಮಾರು 70ಕ್ಕೂ ಹೆಚ್ಚು ಮಹಿಳಾ ಸಹಕಾರ ಸಂ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲ ಸಂಗಳು ಲಾಭದಲ್ಲಿವೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನಂದಿನಿ ರ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಕಾರ್ಯದರ್ಶಿಗಳಿಗೆ ಪ್ರಾದೇಶಿಕ ಸಭೆ ಹಾಗೂ ಮೃತ ಹಸುಗಳ ರೈತರಿಗೆ ವಿಮಾ ಚೆಕ್​ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.85 ಅಂಕಗಳಿಸಿದ ಡೇರಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅತೀ ಹೆಚ್ಚು ಹಾಲು ಶೇಖರಿಸಿದ್ದ ಡೇರಿ, ಅತೀ ಹೆಚ್ಚು ಹಾಲು ಹಾಕಿದ ರೈತರಿಗೆ ಸನ್ಮಾನಿಸಲಾಯಿತು. ತಾಲೂಕು ಡೇರಿ ಕಾರ್ಯದರ್ಶಿಗಳಿಗೆ ್ಯಾನ್​ ಉಡುಗರೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net