

ಮಹಾಲಿಂಗಪುರ: ಪುರಸಭೆ ಸಭಾಭವನದಲ್ಲಿ ಬುಧವಾರ ಅಧ್ಯಕ್ಷ ಯಲ್ಲನಗೌಡ ಪಾಟೀಲ 6.37ಲಕ್ಷ ರೂಪಾಯಿ ಉಳಿತಾಯ ಬಜೆಟ್ ಮಂಡಿಸಿದರು.
ಪಕ್ಷ ಭೇದ ಮರೆತು ಎಲ್ಲ 23 ವಾರ್ಡ್‌ಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಅನುದಾನ ಹಂಚಿಕೆಗೆ ಕ್ರಮವಹಿಸಲಾಗಿದೆ. ಪಟ್ಟಣದ ಅಭಿವೃದ್ಧಿಗೆ ಎಲ್ಲ ಸದಸ್ಯರು ಸಹಕರಿಸಬೇಕು ಎಂದು ಅಧ್ಯಕ್ಷ ಯಲ್ಲನಗೌಡ ಮನವಿ ಮಾಡಿದರು.
ಆದಾಯ: ಪುರಸಭೆಗೆ ಆಸ್ತಿ ತೆರಿಗೆಯಿಂದ ರೂ.1.98 ಕೋಟಿ ರೂ., ವಾಣಿಜ್ಯ ಸಂಕೀರ್ಣ ಬಾಡಿಗೆ 65 ಲಕ್ಷ ರೂ., ಅಭಿವೃದ್ಧಿ ಶುಲ್ಕ 23.50 ಲಕ್ಷ ರೂ., ಕಟ್ಟಡ ಅನುಮತಿ ಪತ್ರ 36.50 ರೂ., ಪರವಾನಗಿ ಶುಲ್ಕ 5.65ಲಕ್ಷ 65 ರೂ., ನೀರಿನ ಕರ 36 ಲಕ್ಷ ರೂ., ಜಾತ್ರೆ ಮತ್ತು ಉರುಸುಗಳಿಂದ 25 ಲಕ್ಷ ರೂ., ಮಾರುಕಟ್ಟೆ ಸಂತೆ ಕರ, ಲಿಲಾವು ಶುಲ್ಕ 12.50 ಲಕ್ಷ ರೂ., ಬಡ್ಡಿ ಮತ್ತು ದಂಡದಿಂದ 75.20 ಲಕ್ಷ ರೂ., ಇತರ ಸಾಮಾನ್ಯ ಜಮೆ 1.89 ಕೋಟಿ ರೂ., ವೇತನ ಅನುದಾನ 4.86 ರೂ., ಎಸ್‌ಎ್ಸಿ ಮುಕ್ತ ನಿಧಿ 33 ಲಕ್ಷ ರೂ., ಎಸ್‌ಎ್ಸಿ ವಿದ್ಯುತ್ ಬಿಲ್, ನೀರು ಸರಬರಾಜು ಮತ್ತು ದಾರಿದೀಪಗಳ ವಿದ್ಯುತ್ ಬಿಲ್ 6.16 ಕೋಟಿ ರೂ. ಪಟ್ಟಣದ ಅಭಿವೃದ್ಧಿ ಯೋಜನಗೆ ವಿಶೇಷ ಅನುದಾನ 15.15 ಲಕ್ಷ ರೂ., 15ನೇ ಹಣಕಾಸು ಯೋಜನೆಯಿಂದ 2.14 ಕೋಟಿ ರೂ., ಬರ ಪರಿಹಾರ 8 ಲಕ್ಷ ರೂ., ಗಣತಿ ಗೌರವಧನ 1.50 ಲಕ್ಷ ರೂ., ಸ್ವಚ್ಛ ಭಾರತ ಮಿಷನ್ ಅನುದಾನ 28 ಲಕ್ಷ ರೂ., ಕೊಳಚೆ ಪ್ರದೇಶ ಅಭಿವೃದ್ಧಿ ಅನುದಾನ 10 ಲಕ್ಷ ರೂ. ಹೀಗೆ ವಿವಿಧ ಮೂಲಗಳಿಂದ ಒಟ್ಟಾರೆ ಸುಮಾರು 24.40 ಕೋಟಿ ರೂ. ಅಧಿಕ ಆದಾಯ ನಿರೀಕ್ಷಿಸಲಾಗಿದೆ.
ಖರ್ಚು: ನೀರು ಸರಬರಾಜು ನಿರ್ವಹಣೆ ಮತ್ತು ಸಿಬ್ಬಂದಿ ವೇತನ, ಬೋರವೆಲ್ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರ ವೆಚ್ಚಗಳಿಗಾಗಿ 4.90 ಕೋಟಿ ರೂ., ಬೀದಿ ದೀಪಗಳ ದುರಸ್ತಿ ಮತ್ತು ನಿರ್ವಹಣೆಗೆ 72.10 ಲಕ್ಷ ರೂ., ವರ್ತುಲಗಳ ನಿರ್ವಹಣೆಗೆ 8.50 ಲಕ್ಷ ರೂ., ವೀರ ಯೋಧರ ಸ್ಮಾರಕ ನಿರ್ಮಾಣಕ್ಕೆ 10 ಲಕ್ಷ ರೂ. ಸೇರಿ ಒಟ್ಟಾರೆ 24.34 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದ್ದು, ಉಳಿತಾಯ ಬಜೆಟ್ ಇದಾಗಿದೆ.
ಪ್ರಲ್ಹಾದ ಸಣ್ಣಕ್ಕಿ, ಬಸವರಾಜ ಹಿಟ್ಟಿನಮಠ ಹಾಗೂ ರಾಜು ಚಮಕೇರಿ ಮಾತನಾಡಿ, ಯಾವುದೇ ಸಮಾಜದ ಕೆಲಸಕ್ಕೆ ಹಣ ಬಿಡುಗಡೆ ಮಾಡುವಾಗ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಲಹೆ ನೀಡಿದರು.
ಚನ್ನಬಸು ಯರಗಟ್ಟಿ ಮಾತನಾಡಿ, ಅನೇಕ ದಿನಗಳಿಂದ ಜೆಸಿಬಿ ಕೆಟ್ಟು ನಿಂತಿದೆ. ದುರಸ್ತಿ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಮಂಗಳವಾರ ದುರಸ್ತಿ ಮಾಡಿಸಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಸ್ಥಾಯಿ ಸಮಿತಿ ಚೇರ್ಮನ್ ಅಬ್ದುಲ ರಜಾಕ ಬಾಗವಾನ, ಶೇಖರ ಅಂಗಡಿ, ಬಲವಂತಗೌಡ ಪಾಟೀಲ, ಸಜನಸಾಬ ಪೆಂಡಾರಿ, ಮುಸ್ತಾಕ ಚಿಕ್ಕೋಡಿ, ಡಾ.ಸವಿತಾ ಕೋಳಿಗುಡ್ಡ, ಪುರಸಭೆ ವ್ಯವಸ್ಥಾಪಕ ಎಸ್.ಎನ್. ಪಾಟೀಲ, ಕಿರಿಯ ಅಭಿಯಂತರ ಎಸ್.ಎಂ. ಕಲಬುರ್ಗಿ, ಅಧಿಕಾರಿಗಳಾದ ಮಹಾಲಿಂಗ ಮುಗಳಖೋಡ, ಆರ್.ಬಿ. ಸುಣಗಾರ, ಎಸ್.ಎಂ. ಮುಲ್ಲಾ, ಚಿದಾನಂದ ಮಠಪತಿ. ರಾಜೇಶ್ವರಿ ಸೋರಗಾಂವಿ, ವಿಕ್ರಂ ತಹಸೀಲ್ದಾರ್, ಎಂ.ಕೆ.ದಳವಾಯಿ ಇದ್ದರು.