

ಬಾಳೆಹೊನ್ನೂರು: ಹುಯಿಗೆರೆ ಗ್ರಾಮದ ಶಂಕರ ಭಾರತಿ ಗೋ ಶಾಲೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗೋವುಗಳ ಚಿಕಿತ್ಸಾ ಘಟಕಕ್ಕೆ ಉದ್ಯಮಿ ಕಿಶೋರ್ ಕುಮಾರ್ ಹೆಗ್ಡೆ 5 ಲಕ್ಷ ರೂ.ಆರ್ಥಿಕ ನೆರವು ನೀಡಿದ್ದಾರೆ ಎಂದು ಗೋ ಶಾಲೆ ಮುಖ್ಯಸ್ಥ ಪ್ರವೀಣ್ ಖಾಂಡ್ಯ ತಿಳಿಸಿದ್ದಾರೆ.
ನಮ್ಮ ಗೋ ಶಾಲೆಯಲ್ಲಿ ಅಪಘಾತ, ಅಂಗವಿಕಲತೆಗೆ ತುತ್ತಾದ, ಸಾಂಕ್ರಾಮಿಕ ರೋಗಗಳಿಂದ ತುತ್ತಾದಂತಹ ಗೋವುಗಳನ್ನು ಚಿಕಿತ್ಸಾ ಘಟಕದಲ್ಲಿ ಆರೈಕೆ ಮಾಡಲಾಗುವುದು. ಇದಕ್ಕಾಗಿ ನೂತನವಾಗಿ ಚಿಕಿತ್ಸಾ ಘಟಕವನ್ನು ನಿರ್ಮಿಸುತ್ತಿದ್ದು, ಜಿಲ್ಲೆಯ ಉದ್ಯಮಿ ಲ್ೈಲೈನ್ ಫೀಡ್ಸ್‌ನ ಕಿಶೋರ್ ಕುಮಾರ್ ಹೆಗ್ಡೆಯವರು ಸ್ವಯಂ ಪ್ರೇರಿತವಾಗಿ ಈ ಘಟಕಕ್ಕೆ 5 ರೂ.ಲಕ್ಷದ ಆರ್ಥಿಕ ನೆರವನ್ನು ನೀಡಿದ್ದಾರೆ.
ಶಂಕರ ಭಾರತಿ ಗೋ ಶಾಲೆ ಹಿಂದು ಸಮಾಜದ ನಂಬಿಕೆಗಳಿಸಿ ಗೋವುಗಳಿಗೆ ಶಾಶ್ವತವಾದ ಮತ್ತು ಸುರಕ್ಷತೆ ಹೊಂದಿರುವಂತಹ ಒಂದು ತಾಣವಾಗಿ ನಿರ್ಮಾಣಗೊಳ್ಳುತ್ತಿದೆ. ಇದಕ್ಕೆ ಹಲವರು ಸಹಕರಿಸುತ್ತಿದ್ದು, ಉದ್ಯಮಿ ಮಂಚೇಗೌಡ ಅವರು ಗೋವುಗಳ ಕುಡಿಯುವ ನೀರಿಗಾಗಿ ಬೋರ್‌ವೆಲ್, ಮೋಟಾರ್, ಪೈಪ್‌ಲೈನ್‌ಗಾಗಿ 80 ಸಾವಿರ ರೂ.ಸಹಾಯಧನ ನೀಡಿದ್ದಾರೆ. ಶೃಂಗೇರಿಯ ವಕೀಲ ಸತೀಶ್ ಗೋಚುವಳ್ಳಿ ತಮ್ಮ ಮಾತೃಶ್ರೀ ಅವರ ಹೆಸರಿನಲ್ಲಿ 12 ಸಾವಿರ ರೂ.ಹಾಗೂ ಕಾಂಗ್ರೆಸ್ ಮುಖಂಡ ಗಿರೀಶ್ ಹುಯಿಗೆರೆ ವಾಟರ್‌ಟ್ಯಾಂಕ್ ನಿರ್ಮಾಣಕ್ಕಾಗಿ 18 ಸಾವಿರ ರೂ.ಸಹಾಯ ಧನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.