ಎಸ್ಸಿ, ಎಸ್ಟಿ ಜನರ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ 42 ಕೋಟಿ ರೂ. ಮಂಜೂರು

14 may tnp 02
ತಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಬುಧವಾರ ವಿಶೇಷ ಘಟಕ ಅನುದಾನದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಸಂಸದ ಸುನೀಲ್ ಬೋಸ್ ಭೂಮಿಪೂಜೆ ನೆರವೇರಿಸಿದರು. ಬಸವಣ್ಣ, ರಾಜು, ನಾಗಲಾಂಬಿಕಾ, ಎಂ. ಪರಶಿವಮೂರ್ತಿ, ಸುಂದರ ನಾಯಕ ಇತರರು ಇದ್ದರು.
Published on

ತಿ.ನರಸೀಪುರ: ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದ ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ವಿಶೇಷ ಘಟಕ ಯೋಜನೆ(ಎಸ್ಸಿಪಿ/ಟಿಎಸ್ಪಿ)ಯಡಿ 12 ಕೋಟಿ ರೂ.ಅನುದಾನ ಹಾಗೂ ವಿವಿಧ ಸಮುದಾಯಗಳ ಭವನವನ್ನು ನಿರ್ಮಾಣ ಮಾಡಲು 30 ಕೋಟಿ ರೂ.ಗಳ ಅನುದಾನವನ್ನು ರಾಜ್ಯ ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.

ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಬುಧವಾರ ವಿಶೇಷ ಘಟಕ ಯೋಜನೆ(ಎಸ್ಸಿಪಿ) ಅನುದಾನ 20 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ, ಗ್ರಾಮಸ್ಥರ ಅಹವಾಲು ಆಲಿಸಿ ಮಾತನಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳು ವಾಸವಿರುವ ಕಾಲನಿಗಳಲ್ಲಿ ಬಾಕಿ ಉಳಿದ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು 12 ಕೋಟಿ ರೂ. ಅನುದಾನವನ್ನು ಆಯ್ಕೆ ಮಾಡಲಾದ ಗ್ರಾಮಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲೂ ಸಣ್ಣ ಪುಟ್ಟ ಸಮುದಾಯಗಳಿಗೂ ಆದ್ಯತೆ ನೀಡಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೂ ಕೆಲ ಸಮುದಾಯಕ್ಕೆ ಭವನಗಳನ್ನು ನಿರ್ಮಾಣ ಮಾಡಲು ಆಗಿರಲಿಲ್ಲ. ಸಮುದಾಯ ಭವನ ಇಲ್ಲದ ಸಮುದಾಯಗಳಿಗೆ ಆದ್ಯತೆ ನೀಡಿ, ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ನೀಡಲು ಸಚಿವ ಎಚ್.ಸಿ.ಮಹದೇವಪ್ಪ ಅವರು ರಾಜ್ಯ ಸರ್ಕಾರದಿಂದ 30 ಕೋಟಿ ರೂ. ಮಂಜೂರು ಮಾಡಿದ್ದಾರೆ. ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಆಯಾಯ ಸಮುದಾಯಗಳ ಸಲಹೆ ಪಡೆದು, ಹಂಚಿಕೆ ಮಾಡಲಾಗುವುದು ಎಂದು ಸುನೀಲ್ ಬೋಸ್ ತಿಳಿಸಿದರು.

ತಾಲೂಕಿನ ವ್ಯಾಸರಾಜಪುರ ಗ್ರಾಮದಿಂದ ಪ್ರವಾಸವನ್ನು ಆರಂಭಿಸಿದ ಸಂಸದರು ಸಿದ್ದನಹುಂಡಿ, ಜಗಜೀವನಗ್ರಾಮ, ಚಿಕ್ಕಲಕ್ಷ್ಮೀಪುರ, ಉಕ್ಕಲಗೆರೆ, ಎಂ.ಎಲ್.ಹುಂಡಿ ಹಾಗೂ ಕಳ್ಳೀಪುರ ಗ್ರಾಮಗಳಲ್ಲಿ ವಿಶೇಷ ಘಟಕ ಅನುದಾನದಲ್ಲಿ ಪರಿಶಿಷ್ಟರ ಕಾಲನಿಗಳಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿದರು. ಸುನೀಲ್ ಬೋಸ್ ಅವರು ತಡವಾಗಿ ಆಗಮಿಸಿದರೂ ಕಾದು ಕುಳಿತಿದ್ದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಟಾಕಿ ಸಿಡಿಸಿ, ಭಾರಿ ಗಾತ್ರದ ಹಾರಗಳನ್ನು ಹಾಕಿ ಅದ್ದೂರಿ ಸ್ವಾಗತ ಕೋರಿದರು. ಸ್ಥಳೀಯ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಹಾಜರಿದ್ದ ಅಧಿಕಾರಿಗಳಿಗೆ ಪರಿಹರಿಸುವಂತೆ ಸೂಚಿಸಿದರು.

ಅಂಬೇಡ್ಕರ್ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಮಹದೇವಸ್ವಾಮಿ, ಭೂ ನ್ಯಾಯ ಮಂಡಳಿ ಸದಸ್ಯ ಕುಕ್ಕೂರು ಗಣೇಶ್, ಎಪಿಎಂಸಿ ಮಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ, ತಾಪಂ ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನಸ್ವಾಮಿ, ಮಾಜಿ ಸದಸ್ಯ ರಾಮಲಿಂಗಯ್ಯ, ಕೆಬ್ಬೆ ಶಿವಸ್ವಾಮಿ, ರಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಚನ್ನಕೇಶವ, ಸುನೀಲ್ ಬಾಸ್ ಯುವ ಬ್ರಿಗೇಡ್ ಸಂಚಾಲಕ ಕುಮಾರ್ ರಾಮೇಗೌಡ, ತಲಕಾಡು ಆನಂದ, ಬೆನಕನಹಳ್ಳಿ ಅರುಣ್, ಕೇತಹಳ್ಳಿ ಹರೀಶ್, ಸೋಸಲೆ ದೇವರಾಜು, ಅಧ್ಯಕ್ಷೆ ನಾಗಲಾಂಬಿಕಾ, ಸದಸ್ಯರಾದ ರವಿಶಂಕರ್, ಕೇಬಲ್ ಮಲ್ಲೇಶ, ಮಾಜಿ ಸದಸ್ಯ ಉಕ್ಕಲಗೆರೆ ರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ, ಮಾಜಿ ಉಪಾಧ್ಯಕ್ಷ ಸಿದ್ದಪ್ಪ, ಸೋಸಲೆ ಪ್ರಾಥಮಿಕ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಂ ಪರಶಿವಮೂರ್ತಿ, ಯುವ ಕಾಂಗ್ರೆಸ್ ಅಧ್ಯಕ್ಷ ನವಾಜ್ ಖಾನ್, ಸಚಿವರ ಆಪ್ತ ಸಹಾಯಕ ಬಿ.ಬಸವರಾಜು, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಎಚ್.ಸಿ. ರತೀಶ್, ಪಿ.ಎನ್.ಚರಿತಾ, ಕೆ.ಶಿವರಾಜು, ಸತೀಶ್ ಚಂದ್ರನ್, ಸೆಸ್ಕ್ ವೀರೇಶ್, ಕೆಡಿಪಿ ಸದಸ್ಯೆ ವೀಣಾ ಶಿವಕುಮಾರ್, ಬನ್ನೂರು ಪುರಸಭೆ ಸದಸ್ಯ ಶಿವಣ್ಣ, ಶಿವಮೂರ್ತಿ, ಜೈ ಭೀಮ್ ಹೋರಾಟ ಸಮಿತಿ ಅಧ್ಯಕ್ಷ ಯಾಚೇನಹಳ್ಳಿ ರಾಘವೇಂದ್ರ, ಬೀಡನಹಳ್ಳಿ ಮಹದೇವ, ಗುತ್ತಿಗೆದಾರ ಕೆ.ಎಂ. ಮಧುಕುಮಾರ್, ಮುಖಂಡರಾದ ಸಿದ್ದನಹುಂಡಿ ಸೋಮಣ್ಣ, ಗದ್ದೆಮೊಳೆ ಸಿದ್ದರಾಜು, ಎಂಎಲ್‌ಹುಂಡಿ ಶ್ರೀಕಂಠಸ್ವಾಮಿ, ಜೆ ಅನುಪ್ ಗೌಡ, ಉಕ್ಕಲಗೆರೆ ನಾಗೇಂದ್ರ, ಸುಂದರ ನಾಯಕ, ಕೆ ಅಶ್ವಿನ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net