11 ತಿಂಗಳಲ್ಲಿ 4.49 ಲಕ್ಷ ರೂ.ಕಾಣಿಕೆ ಸಂಗ್ರಹ

15 HANUR 6
ಸುಳವಾಡಿ ಕಿಚ್ಚುಗುತ್ತಿ ಮಾರಮ್ಮನ ದೇಗುಲದಲ್ಲಿ ಹುಂಡಿ ಕಾಣಿಕೆ ಏಣಿಕೆ ಮಾಡಲಾಯಿತು. ಸುರೇಖಾ, ಶಿವಕುಮಾರ್, ವಿನೋದ್, ರಾಜು, ಕಾರ್ತಿಕ್ ಇತರರು ಇದ್ದರು.
Published on

ಹನೂರು: ತಾಲೂಕಿನ ಸುಳವಾಡಿ ಕಿಚ್ಚುಗುತ್ತಿ ಮಾರಮ್ಮನ ದೇಗುಲದಲ್ಲಿ ಮಂಗಳವಾರ ನಡೆದ ಹುಂಡಿ ಕಾಣಿಕೆ ಏಣಿಕೆಯಲ್ಲಿ 11 ತಿಂಗಳ ಅವಧಿಗೆ 4.49 ಲಕ್ಷ ರೂ. ಸಂಗ್ರಹವಾಗಿದೆ. ಇದು ವಿಷ ಪ್ರಸಾದ ದುರಂತ ಪ್ರಕರಣದ ಬಳಿಕ ನಡೆದ 9ನೇ ಹುಂಡಿ ಕಾಣಿಕೆ ಏಣಿಕೆಯಾಗಿದೆ.

2018, ಡಿ.14ರಂದು ನಡೆದ ವಿಷ ಪ್ರಸಾದ ದುರಂತ ಪ್ರಕರಣದ ಹಿನ್ನೆಲೆಯಲ್ಲಿ ದೇಗುಲವನ್ನು ಬಂದ್ ಮಾಡಲಾಗಿತ್ತು. ಬಳಿಕ ಭಕ್ತರ ಒತ್ತಾಯದ ಮೇರೆಗೆ 2020, ಅ.21ರಿಂದ ಬಾಗಿಲು ತೆರೆದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ತಮಿಳುನಾಡು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದರು. ಮಂಗಳವಾರ ಬೆಳಗ್ಗೆ 9ರಿಂದ ಆರಂಭವಾದ ಹುಂಡಿ ಏಣಿಕೆ ಸಂಜೆ 4ರವರೆಗೂ ನಡೆಯಿತು. 4,49,105 ರೂ ಸಂಗ್ರಹವಾಯಿತು.

ಉಪ ತಹಸೀಲ್ದಾರ್ ಸುರೇಖಾ, ರಾಜಸ್ವ ನಿರೀಕ್ಷಕ ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿಗಳಾದ ವಿನೋದ್, ಕಾರ್ತಿಕ್, ರಾಜು, ವಾಸುದೇವ, ಶಿವಕುಮಾರ್, ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net