ರಾಯರ ಹುಂಡಿಗೆ ೪.೦೫ ಕೋಟಿ ರೂ.ಸಂಗ್ರಹ

RAICHUR
RAICHUR
Published on

ರಾಯಚೂರು ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ಹುಂಡಿ ಎಣಿಕೆ ಕಾರ್ಯ ಬುಧವಾರ ಪೂರ್ಣಗೊಂಡಿದ್ದು ಕಳೆದ ೩೨ ದಿನಗಳಲ್ಲಿ ಒಟ್ಟು ೪.೦೫ ಕೋಟಿ ರೂಪಾಯಿ ಭಕ್ತರಿಂದ ಕಾಣಿಕೆ ಸಂಗ್ರಹವಾಗಿದೆ.

ಶ್ರೀಮಠದಲ್ಲಿ ಭಕ್ತರು ಹಾಗೂ ಸಿಬ್ಬಂದಿಗಳಿAದ ಮಂಗಳವಾರ ಬೆಳಗ್ಗೆಯಿಂದ ಕಾಣಿಕೆ ಎಣಿಕೆ ಕಾರ್ಯ ಆರಂಭಿಸಿ ಬುಧವಾರ ಪೂರ್ಣಗೊಳಿಸಿದ್ದಾರೆ. ಈ ಪೈಕಿ ೩.೯೪ ಕೋಟಿ ರೂ.ಮೌಲ್ಯದ ನೋಟುಗಳು, ೧೨.೨೨ ಲಕ್ಷದ ನಾಣ್ಯಗಳು, ೧೧೬ ಗ್ರಾಂ ಚಿನ್ನಾಭರಣ, ೧.೪೯೫ ಕೆಜಿ ಬೆಳ್ಳಿ ಆಭರಣಗಳು ಕಾಣಿಕೆ ಬಂದಿವೆ ಎಂದು ಶ್ರೀಮಠದ ವ್ಯವಸ್ಥಾಪಕ ವೆಂಕಟೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net