ಕಾಸರಗೋಡು: ಜಿಲ್ಲೆಯ ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ಇರುವ ಸೇವೆಗಳನ್ನು ಮುಂದುವರಿಸಲು ಮುಖ್ಯಮಂತ್ರಿಗಳ ನಿರ್ದೇಶನದಂತೆ 376.84 ಲಕ್ಷ ರೂ.ಮಂಜೂರು ಮಾಡಲು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಆದೇಶ ನೀಡಿದ್ದಾರೆ.
ಎಂಡೋಸಲ್ಫಾನ್ ಸಂತ್ರಸ್ತರಿಗೆ ನಿರಂತರ ನೆರವು ನೀಡುವ ಉದ್ದೇಶದಿಂದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನ ಅಂಗವಾಗಿ ಸಂತ್ರಸ್ತರ ಚಿಕಿತ್ಸೆ ಮತ್ತು ಇತರ ನಿರ್ವಹಣಾ ಚಟುವಟಿಕೆಗಳಿಗೆ ಹಣ ಹಂಚಿಕೆ ಮಾಡಲು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ.
ಜಿಲ್ಲೆಯ 11 ಗ್ರಾಪಂಗಳಲ್ಲಿ ವಾಸಿಸುವ 6,727 ಎಂಡೋಸಲ್ಫಾನ್ ಸಂತ್ರಸ್ತರಲ್ಲಿ ಅನೇಕರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಆ ಕುಟುಂಬಗಳ ಆದಾಯ ಕಡಿಮೆಯಾಗಿದ್ದು, ಕೆಳಮಟ್ಟದ ಕುಟುಂಬಗಳಿಗೆ ಅಗತ್ಯ ಬೆಂಬಲ ನೀಡಲು ಸಾಧ್ಯವಾಗುತ್ತಿಲ್ಲ, ತುರ್ತು ನೆರವು ನೀಡದಿದ್ದರೆ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಚಟುವಟಿಕೆಗಳು ಸ್ಥಗಿತಗೊಳ್ಳುವ ಪರಿಸ್ಥಿತಿ ತಡೆಗಟ್ಟಲು ಯೋಜನೆಗೆ ರೂಪಿಸಲಾಗಿದೆ.
ಯೋಜನೆ ಎಂಡೋಸಲ್ಫಾನ್ ಸಂತ್ರಸ್ತರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಒಳಗೊಂಡಿದ್ದು, ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ವಿತರಣೆ, ಮಾನವ ಸಂಪನ್ಮೂಲ ಒದಗಿಸುವುದು, ಆಂಬುಲೆನ್ಸ್ ಸೌಲಭ್ಯ ನೀಡುವುದು, ಡೈಪರ್ ಖರೀದಿ, ಉಪಶಾಮಕ ಆರೈಕೆ ಮತ್ತು ಆಯ್ಕೆಮಾಡಿದ ಆಸ್ಪತ್ರೆಗಳಿಂದ ಉಚಿತ ಚಿಕಿತ್ಸೆ , ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ಬೆಂಬಲ ಜತೆಗೆ ಸಹಾಯ ಒದಗಿಸಲಿದೆ. ಜಿಲ್ಲೆಯಲ್ಲಿ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುವ ಪಂಚಾಯಿತಿ ಪಾಲು ಕಡಿಮೆ ಇರುವ 19 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ 147.22 ಲಕ್ಷ ರೂ. ಹೆಚ್ಚುವರಿ ಹಂಚಿಕೆಯನ್ನು ಜಿಲ್ಲಾಧಿಕಾರಿ ಇನ್ಬಾಶೇಖರ್ ಅಧ್ಯಕ್ಷತೆಯ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾಮಟ್ಟದ ಸಮಿತಿ ಮಂಜೂರು ಮಾಡಿದೆ.