ಸಿದ್ಧಾರೂಢ ಮಠದಲ್ಲಿ 36.33 ಲಕ್ಷ ರೂ. ಕಾಣಿಕೆ ಸಂಗ್ರಹ

Neew SDM New
Published on

ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಕೇವಲ 32 ದಿನಗಳಲ್ಲಿ 36.33 ಲಕ್ಷ ರೂ. ಕಾಣಿಕೆ ಹಣ ಸಂಗ್ರಹಗೊಂಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶ್ರೀ ಸಿದ್ಧಾರೂಢ ನಗರದ ಶಾಖೆಯ ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ಭಕ್ತರ ಸಮೂಹದಲ್ಲಿ ಇತ್ತೀಚೆಗೆ ಶ್ರೀಮಠದ ಕಾಣಿಕೆ ಪೆಟ್ಟಿಗೆ ತೆರೆಯಲಾಯಿತು. ಮೇ 25ರಿಂದ ಜೂನ್ 24ರವರೆಗೆ ಕಾಣಿಕೆ ಪೆಟ್ಟಿಗೆಯಲ್ಲಿ 36,33,679 ರೂ. ಸಂಗ್ರಹಗೊಂಡಿತ್ತು.

ಟ್ರಸ್ಟ್ ಕಮಿಟಿ ಚೇರ್ಮನ್ ಚೆನ್ನವೀರ ಮುಂಗುರವಾಡಿ, ವೈಸ್ ಚೇರ್ಮನ್ ವಿನಾಯಕ ಘೊಡಕೆ, ಧರ್ಮದರ್ಶಿಗಳಾದ ಉದಯಕುಮಾರ ನಾಯ್ಕ, ಮಂಜುನಾಥ ಮುನವಳ್ಳಿ, ವಿ.ವಿ. ಮಲ್ಲಾಪೂರ, ಗೀತಾ ಕಲಬುರ್ಗಿ, ಸರ್ವಮಂಗಳಾ ಪಾಠಕ, ವಸಂತ ಸಾಲಗಟ್ಟಿ, ಡಾ. ಗೋವಿಂದ ಮಣ್ಣೂರ ಹಾಗೂ ಇತರರು ಹಣ ಎಣಿಕೆ ಸಂದರ್ಭದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net