ಶಾಲಾ ಕೊಠಡಿ ನಿರ್ಮಾaಣಕ್ಕೆ 35 ಲ ರೂ. ಮಂಜೂರು

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ: ನಗರದ ಮತೇತ್ರ ವ್ಯಾಪ್ತಿಯ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಸಭಾಭವನ ದುರಸ್ತಿಗಾಗಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ 35 ಲ ರೂಗಳು ಮಂಜೂರಾಗಿದೆ.

ಸದರಿ ಅನುದಾನದಲ್ಲಿ ಇಲ್ಲಿನ ಡಾ. ಬಿ.ಆರ್​. ಅಂಬೇಡ್ಕರ್​ ಮಾರ್ಗದಲ್ಲಿರುವ ಕನ್ನಡ ಗಂಡು ಮಕ್ಕಳ ಸರ್ಕಾರಿ ಶಾಲೆ ನಂ. 4 ರಿಮ್ಯಾಂಡ್​ ಹೋಮ್​ ಆವರಣದಲ್ಲಿ ಮೂರು ಕೊಠಡಿಗಳ ನಿರ್ಮಾಣ ಕಾಮಗಾರಿಗೆ 25 ಲ ರೂ., ಹಾಗೂ ಅದೇ ಶಾಲೆ ಆವರಣದಲ್ಲಿನ ಸಭಾ ಭವನ ದುರಸ್ತಿ ಕಾಮಗಾರಿಗೆ 10 ಲ ರೂ., ಅನುದಾನ ಮಂಜೂರಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳರ ಸಾರ್ವಜನಿಕ ಸಂಪರ್ಕ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net