ಟ್ರೇಡಿಂಗ್ ಹೆಸರಿನಲ್ಲಿ 30 ಲಕ್ಷ ರೂ. ವಂಚನೆ

Published on

ಮೈಸೂರು: ಟ್ರೇಡಿಂಗ್ ಹೆಸರಿನಲ್ಲಿ ಯುವತಿ 30 ಲಕ್ಷ ರೂ. ವಂಚನೆ ಮಾಡಿದ್ದಾಗಿ ರಾಜಕುಮಾರ್ ಎಂಬುವರು ಸರಸ್ವತಿಪುರಂ ಠಾಣೆಗೆ ದೂರು ನೀಡಿದ್ದಾರೆ.

ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಬರುತ್ತದೆ ಎಂದು ನಂಬಿಸಿದ ಲಾವಣ್ಯಾ, ಹಲವು ತಿಂಗಳಿನಿಂದ 30 ಲಕ್ಷ ರೂ. ಹಣ ಪಡೆದು ಬಳಿಕ ಪರಾರಿಯಾಗಿದ್ದಾಳೆ. ಈ ಹಿಂದೆ ಲಾವಣ್ಯಾ ಅವರ ಅಕ್ಕ ಶ್ರುತಿ ಅವರು ಟ್ರೇಡಿಂಗ್ ಹೆಸರಲ್ಲಿ ಹಣ ಪಡೆದು ಮೋಸ ಮಾಡಿ ಜೈಲು ಪಾಲಾಗಿದ್ದರು. ಶ್ರುತಿಗೂ ಹಣ ಕೊಟ್ಟಿದ್ದ ದೂರುದಾರ ರಾಜಕುಮಾರ್, ಈಗ ಆಕೆಯ ತಂಗಿಯನ್ನು ನಂಬಿ ಹಣ ಕೊಟ್ಟು ಮತ್ತೆ ಮೋಸ ಹೋಗಿದ್ದಾರೆ. ಟ್ರೇಡಿಂಗ್ ಹೆಸರಿನಲ್ಲಿ ಹಲವಾರು ಜನರ ಬಳಿ ಹಣ ಪಡೆದು ಮೋಸ ಮಾಡಿದ್ದಾಳೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net