ಥೀಮ್ ಪಾರ್ಕ್ ನಿರ್ಮಾಣಕ್ಕೆ 30 ಕೋಟಿ ರೂ. ಅನುಮೋದನೆ

17kittur1a
Published on

ಚನ್ನಮ್ಮನ ಕಿತ್ತೂರು: ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಯ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಕೋಟೆಯ ಮಧ್ಯಭಾಗದಲ್ಲಿರುವ 7 ಎಕರೆ ತೋಟದ ಜಾಗದಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ಗುರುವಾರ ಸಚಿವ ಸಂಪುಟದಲ್ಲಿ 30 ಕೋಟಿ ರೂಪಾಯಿ ಅನುಮೋದನೆ ನೀಡಲಾಗಿದೆ.

ಕಿತ್ತೂರಿನ ರಾಜ್ಯ ವೈಭವ ಹಾಗೂ ಯುದ್ಧದ ಸನ್ನಿವೇಶಗಳು ನಿರ್ಮಾಣವಾಗಲಿದ್ದು, ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್‌ಕ್ಕಿಂತ ವಿಭಿನ್ನವಾಗಿರಲಿದ್ದು, ಪ್ರವಾಸಿಗರನ್ನು ರಂಜಿಸಲಿದೆ.

ಶತಕಗಳಿಂದ ಅಭಿವೃದ್ಧಿ ವಂಚಿತ ಕಿತ್ತೂರು ಕೋಟೆಗೆ ಅಭಿವೃದ್ಧಿ ಭಾಗ್ಯ ಬಂದಿರುವುದು ನಾಡಿನಲ್ಲಿ ಸಂತಸ ತಂದಿದೆ. ಈಗಾಗಲೇ ಕೋಟೆ ಆವರಣ, ಅರಮನೆಗೆ ಘತವೈಭವದ ಸ್ಪರ್ಶ ನೀಡುತ್ತಿರುವ ಕಾಮಗಾರಿ ಪ್ರಗತಿಯಲ್ಲಿದೆ. ಥೀಮ್ ಪಾರ್ಕ್ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ರಾಣಿ ಚನ್ನಮ್ಮ ಹಾಗೂ ವೀರರ ಪರಾಕ್ರಮದ ಇತಿಹಾಸ ಪ್ರವಾಸಿಗರಿಗೆ ಸಾರಲಿದೆ. ಶಾಸಕ ಬಾಬಾಸಾಹೇಬ ಪಾಟೀಲ ಹಲವು ಯೋಜನೆ ಮೂಲಕ ನಾಡಿನ ಅಭಿವದ್ಧಿಗೆ ಮುಂದಾಗಿರುವುದು ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net