

ಚಿಕ್ಕೋಡಿ: ನಿಪ್ಪಾಣಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾ-ಣ-ಕ್ಕೆ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಶ್ರೀ ಭೂಮಿಪೂಜೆ ನೆರವೇರಿಸಲಾಗುವು-ದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಸಮೀಪದ ಯಕ್ಸಂಬಾದ ಗೃಹ ಕಾರ್ಯಾ-ಲ-ಯ-ದ-ಲ್ಲಿ ಮಾತನಾಡಿದ ಅವರು, ಕಾಲೇಜಿ-ಗೆ ಹೆಚ್ಚುವರಿ ಕೊಠಡಿ, ಪ್ರಯೋಗಾಲಯ, ಮೂಲಸೌಕರ್ಯ ಹಾಗೂ ಹೈಟೆಕ್ ಕಟ್ಟಡ ನಿರ್ಮಾಣಕ್ಕೆ ನಗರಸಭೆ ವತಿಯಿಂದ 2 ಎಕರೆ ಜಾಗವನ್ನು ಬಸವೇಶ್ವರ ಪೊಲೀಸ್ ಠಾಣೆ ಎದುರಿಗೆ -ನೀ-ಡ-ಲಾ-ಗಿ-ದೆ ಎಂದರು. ಸಚಿ-ವೆ-ಯಿ-ದ್ದ ಸಂದ-ರ್ಭ-ದ-ಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರಿಗೆ ನಿ-ಪ್ಪಾ-ಣಿ-ಯ-ಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡುವಂತೆ ಮನ-ವಿ ಮಾಡ-ಲಾ-ಗಿ-ತ್ತು. ಮನವಿಗೆ ಸ್ಪಂದಿಸಿ ಬಿಜೆಪಿ ಸರ್ಕಾರವಿದ್ದಾಗ 2020&21 ಸಾಲಿನಲ್ಲಿ ಮಂಜೂರು ಮಾಡ-ಲಾ-ಗಿ-ದೆ. ಸ್ವಂತ ಕಟ್ಟಡವಿಲ್ಲದ ಕಾರಣ ಮುನ್ಸಿಪಲ್ ಹೈಸ್ಕೂಲ್ನಲ್ಲಿ ತರಗತಿ ಪ್ರಾರಂಭಿಸ-ಲಾ-ಗಿ-ದೆ. ಅಧಿವೇಶನದಲ್ಲಿ ಸಚಿವರ ಗಮನ ಸೆಳೆದು 3 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ. ನಿಪ್ಪಾಣಿಯಲ್ಲಿ ಇಲ್ಲಿಯ ವರೆಗೆ ಸರ್ಕಾರಿ ಪದವಿ ಕಾಲೇಜು ಇರಲಿಲ್ಲ ಎಂದು ತಿಳಿಸಿದರು.