

ಉಗರಗೋಳ: ಸಮೀಪದ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನ ಹುಂಡಿಗಳಿಗೆ 2025ರ ಏಪ್ರಿಲ್ನಿಂದ& ಜೂನ್ ಅವಧಿಯಲ್ಲಿ ಹಾಕಲಾದ ಕಾಣಿಕೆಗಳ ಎಣಿಕೆ ಕಾರ್ಯ ಬುಧವಾರ ಪೂರ್ಣಗೊಂಡಿದ್ದು, 3.81 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ಇದರಲ್ಲಿ 3,39,40,831 ರೂ. ನಗದು, 32,94,500 ರೂ. ಮೌಲ್ಯದ 340 ಗ್ರಾಂ ಚಿನ್ನಾಭರಣ, 9,79,500 ರೂ. ಮೌಲ್ಯದ 8.797 ಕೆಜಿ ಬೆಳ್ಳಿ ಆಭರಣ ಸೇರಿವೆ. ಐದು ಸುತ್ತುಗಳಲ್ಲಿ ಕಾಣಿಕೆ ಎಣಿಕೆ ಮಾಡಲಾಯಿತು.
2023ರಲ್ಲಿ ಇದೇ ಅವಧಿಯಲ್ಲಿ 1,65,17,056 ರೂ. ಕಾಣಿಕೆ, 2024ರಲ್ಲಿ 1,96,56,035 ರೂ. ಕಾಣಿಕೆ ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದುಪ್ಪಟ್ಟು ಕಾಣಿಕೆ ಸಂಗ್ರಹವಾಗಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ.
ಭಕ್ತರಿಗೆ ವಿವಿಧ ಮೂಲಸೌಕರ್ಯ ಒದಗಿಸಲು ಕಾಣಿಕೆ ಬಳಸಲಾಗುವುದು ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಕಾರ್ಯದರ್ಶಿ ಅಶೋಕ ದುಡಗುಂಟಿ ತಿಳಿಸಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಬೆಳಗಾವಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಬಾಳೇಶ ಅಬ್ಬಾಯಿ, ರಾಜು ಕಗದಾಳ, ಪ್ರಕಾಶ ಪ್ರಭುನವರ, ಅಲ್ಲಮಪ್ರಭು ಪ್ರಭುನವರ, ಆರ್.ಎಚ್. ಸವದತ್ತಿ, ಸಿ.ಎನ್. ಕುಲಕರ್ಣಿ, ಸದಾನಂದ ಶಿಂತ್ರಿ, ಐ.ಸಿ. ಕಗದಾಳ ಇತರರಿದ್ದರು.