

ರಾಯಚೂರು ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ಹುಂಡಿ ಎಣಿಕೆ ಕಾರ್ಯ ಶುಕ್ರವಾರ ಪೂರ್ಣಗೊಂಡಿದ್ದು ಕಳೆದ ಒಂದು ತಿಂಗಳಲ್ಲಿ ಒಟ್ಟು ೩.೪೮ ಕೋಟಿ ರೂಪಾಯಿ ಭಕ್ತರಿಂದ ಕಾಣಿಕೆ ಸಂಗ್ರಹವಾಗಿದೆ.
ಶ್ರೀಮಠದಲ್ಲಿ ಭಕ್ತರು ಹಾಗೂ ಸಿಬ್ಬಂದಿಗಳಿAದ ಬೆಳಗ್ಗೆಯಿಂದ ಕಾಣಿಕೆ ಎಣಿಕೆ ಕಾರ್ಯ ಆರಂಭಿಸಿ ಸಂಜೆ ಪೂರ್ಣಗೊಳಿಸಿದ್ದು, ಈ ಪೈಕಿ ೩.೩೯ ಕೋಟಿ ರೂ.ಮೌಲ್ಯದ ನೋಟುಗಳು, ೯.೩೪ ಲಕ್ಷದ ನಾಣ್ಯಗಳು, ೩೭.೨೦೦ ಗ್ರಾಂ ಚಿನ್ನಾಭರಣ,೧.೨೮೦ ಕೆಜಿ ಬೆಳ್ಳಿ ಆಭರಣಗಳು ಕಾಣಿಕೆ ಬಂದಿವೆ ಎಂದು ಶ್ರೀಮಠದ ವ್ಯವಸ್ಥಾಪಕ ವೆಂಕಟೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.