

ಮುನವಳ್ಳಿ: ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲಿ ್ಲಪುರಸಭೆ ಅಧ್ಯ ಸಿ.ಬಿ. ಬಾಳಿ 2025&26ನೇ ಸಾಲಿನಲ್ಲಿ 15.84 ಕೋಟಿ ರೂ. ಜಮೆ ಹಾಗೂ 15.81 ಕೋಟಿ ರೂ. ಮೊತ್ತ ಖರ್ಚಿನೊಂದಿಗೆ 3.27 ಲ ರೂ. ಮೊತ್ತದ ಉಳಿತಾಯ ಬಜೆಟ್ ಮಂಡಿಸಿದರು.
ಪುರಸಭೆ ನಿಧಿಯಡಿ ಪರಿಶಿಷ್ಟರ ಕಲ್ಯಾಣಕ್ಕಾಗಿ 3.47 ಲ ರೂ., ಇತರ ಹಿಂದುಳಿದ ವರ್ಗದ ಕಲ್ಯಾಣಕ್ಕಾಗಿ 1.04 ಲ ರೂ., ಅಂಗವಿಕಲರ ಕಲ್ಯಾಣಕ್ಕಾಗಿ 72 ಸಾವಿರ ಹಾಗೂ ಎಸ್ಎ್ಸಿ ನಿಧಿಯಡಿ ಪರಿಶಿಷ್ಟರಿಗೆ 16 ಲ ರೂ., ಇತರ ಹಿಂದುಳಿದ ವರ್ಗಗಳಿಗೆ 3.50 ಲ ರೂ. ಅಂಗವಿಕಲರಿಗಾಗಿ 1.95 ಲಕ್ಷ ರೂ. ಕಾಯ್ದಿರಿಸಲಾಗಿದೆ. ರಸ್ತೆ, ಚರಂಡಿ ಕಾಮಗಾರಿಗೆ 56.80 ಲ ರೂ., ನೀರು ಸರಬರಾಜು ಹಾಗೂ ನತ್ಯಾಜ್ಯ ವಿಲೇವಾರಿಗೆ 82.00 ಲ ರೂ., ಸಿಬ್ಬಂದಿ ವೇತನ 1.86 ಕೋಟಿ ರೂ., ವಿದ್ಯುತ್ ಬೀದಿದೀಪ ಹಾಗೂ ನೀರು ಸರಬರಾಜು ವಿದ್ಯುಚ್ಛಕ್ತಿ ವೆಚ್ಚ 87.ರೂ. ಲ, ಸದಸ್ಯರ ಭತ್ಯೆ 5 ಲ ರೂ., ಇತರ ವೆಚ್ಚಗಳು 86 ಲ ರೂ. ಅಂದಾಜು ಖರ್ಚು ಮಾಡಲು ಸಭೆಯಲ್ಲಿ ವಿವರಣೆ ನೀಡಿ ಮುಂಗಡ ಪತ್ರಕ್ಕೆ ಅನುಮೋದನೆ ಪಡೆಯಲಾಯಿತು.
ಸದಸ್ಯ ಸುಭಾಸ ಗೀದಿಗೌಡ್ರ ಮಾತನಾಡಿ, ಪಟ್ಟಣದ ಅಪೂರ್ಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆಗ್ರಹಿಸಿದರು.
ಸಭೆಯಲ್ಲಿ ಹಲವಾರು ಅಭಿವದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ ಪುರಸಭೆಯ ಆದಾಯ ಹೆಚ್ಚಿಸುವ ಹಾಗೂ ಇತರ ವಿಷಯಗಳ ಕುರಿತು ಚರ್ಚೆ ನಡೆಯಿತು.
ಪುರಸಭೆ ಉಪಾಧ್ಯೆ ಕೆ.ಎಚ್. ಹಿರೇಮೇತ್ರಿ, ಸದಸ್ಯರಾದ ಮೀರಾಸಾಬ್ವಟ್ನಾಳ, ಡಿ.ಡಿ.ಕಿನ್ನೂರಿ, ಈಶ್ವರ ಕರೀಕಟ್ಟಿ, ಪ್ರಕಾಶ ನಲವಡೆ, ಗುರುಶಾಂತ ಚಂದರಗಿ, ಶ್ರೀಶೆಲ ನೇಗಿನಾಳ, ಸಮೀವುಲ್ಲಾ ಚೂರಿಖಾನ್, ಬಸವರಾಜ ದೊಡಮನಿ, ಶೀತಲ ಗೋಮಾಡಿ, ಲಲಿತಾ ರೇವಡಗಿ, ರೇವತಿ ಬಾರಕೇರ, ಬಸವರಾಜ ದೊಡಮನಿ, ಸಲೀಂಮಲ್ಲಿಕ
ಬೆಳವಡಿ, ಎಚ್.ಕೆ. ದನದಮನಿ, ಕಸ್ತೂರಿ ಗಂಗಣ್ಣವರ, ಪುರಸಭೆ ಮುಖ್ಯಾಧಿಕಾರಿ ಎಂ.ಎಂ. ತಿಮ್ಮಾಣಿ, ಕಂದಾಯ ಅಧಿಕಾರಿ ಅನಿಲ ಗಿಡ್ನಂದಿ, ಪುರಸಭೆ ಸಿಬ್ಬಂದಿ ಇದ್ದರು.