ಕಡಲ್ಕೊರೆತ ತಡೆಗೆ 25 ಲಕ್ಷ ರೂ. ಮಂಜೂರು : ಸಚಿವ ರೋಶಿ ಆಗಸ್ಟೀನ್ ಭರವಸೆ

07
Published on

ಕಾಸರಗೋಡು: ಬೇಕಲ ತ್ರಿಕ್ಕನ್ನಾಡು ಪ್ರದೇಶದಲ್ಲಿ ಹೆಚ್ಚುತ್ತಿರುವ ಸಮುದ್ರ ಕೊರೆತ ತಡೆಗಟ್ಟಲು ತುರ್ತುಸಹಾಯ ಕೋರಿ ಜಿಲ್ಲೆಯ ಶಾಸಕರಾದ ಸಿ.ಎಚ್. ಕುಂಞಂಬು ಮತ್ತು ಎಂ.ರಾಜಗೋಪಾಲನ್ ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ರೋಶಿ ಆಗಸ್ಟೀನ್ ಅವರನ್ನು ತಿರುವನಂತಪುರದ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.

ಕಡಲ್ಕೊರೆತ ತಡೆಗಟ್ಟುವ ಕ್ರಮಗಳಿಗಾಗಿ ಮೊದಲ ಹಂತದಲ್ಲಿ 25 ಲಕ್ಷ ರೂ. ಮೊತ್ತ ಮಂಜೂರುಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ತ್ರಿಕ್ಕನ್ನಾಡು, ಕೋಟಿಕುಳಂ, ಚಿರಮ್ಮಲ್ ಪ್ರದೇಶದಲ್ಲಿ ಕಡಲ್ಕೊರೆತ ಬಿರುಸುಗೊಂಡಿದ್ದು, ತೃಕನ್ನಾಡು ಪ್ರದೇಶದಲ್ಲಿ ರಾಜ್ಯ ಹೆದ್ದಾರಿಯೂ ಅಪಾಯದಲ್ಲಿದೆ. ಸಮುದ್ರದಿಂದ ಕೆಲವೇ ಮೀಟರ್ ಅಂತರದಲ್ಲಿರುವ ತ್ರಿಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನವೂ ಅಪಾಯದಂಚಿನಲ್ಲಿದೆ. ಈಗಾಗಲೇ ಸನಿಹದ ಭಗವತಿ ಮಂಟಪದ ಗೋಡೆ, ಹೈಮಾಸ್ಟ್ ಬೀದಿ ದೀಪ ಹಾನಿಗೀಡಾಗಿದ್ದು, ಈ ಬಗ್ಗೆ ಶಾಸಕರು ಸಚಿವರಿಗೆ ಮನವರಿಕೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net