

ಬಬಲೇಶ್ವರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳರು ಹೊಸ ಪಕ್ಷ ಕಟ್ಟಿದರೆ ಬಬಲೇಶ್ವರ ಮತಕ್ಷೇತ್ರದ ಸಮಸ್ತ ಹಿಂದುಗಳ ಪರವಾಗಿ 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಮುಂಖಂಡ ಸಂತೋಷ ತಂಬಾಕೆ ಹೇಳಿದರು.
ಪಂಚಮಸಾಲಿ ಸಮಾಜ ಹಾಗೂ ವಿವಿಧ ಹಿಂದುಪರ ಸಂಟನೆಗಳ ಕಾರ್ಯಕರ್ತರು ಬಬಲೇಶ್ವರ ಶಾಂತವೀರ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ ಅವರು ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ. ಅವರು ಕುಟುಂಬ ರಾಜಕಾರಣ, ಭ್ರಷ್ಟಾಚಾರದ ವಿರುದ್ದ ಮಾತನಾಡಿದ್ದಕ್ಕೆ ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಸರಿಯಲ್ಲ. ಉಚ್ಚಾಟನೆ ಆದೇಶ ರದ್ದುಗೊಳಿಸಿ ಅವರನ್ನು ಮತ್ತೇ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದು ಪರ ಪಕ್ಷ ಕಟ್ಟಿದರೆ ಬಬಲೇಶ್ವರ ಮತ ಕ್ಷೇತ್ರದ ಹಿಂದುಗಳು 25 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ಕೊಡುತ್ತೇವೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರರ ಭಾವಚಿತ್ರ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈರಣ್ಣ ಶಿರಮಗೊಂಡ, ಬಸವರಾಜ ಕುರವಿನಶೆಟ್ಟಿ, ಬಸವರಾಜ ಶಿರಮಗೊಂಡ, ಪಪು$್ಪಗೌಡ ಬಿರಾದಾರ, ಅರುಣ ಪತ್ತಾರ, ರವಿ ಕೊಟ್ಯಾಳ, ಧರಣೇಂದ್ರ ಜೈನ್ (ಶೆಟ್ಟಿ), ಸುರೇಶ ಗೌಡಪ್ಪಗೌಡ, ಈರಣ್ಣ ಬೂದಿಹಾಳ, ಸುರೇಶ ಕಾರಜೋಳ, ಮನೋಹರ ಜಂಗಮಶೆಟ್ಟಿ, ಮಹಾದೇವ ಹುಲಿ, ವೀಣಾ ಸಿಂಧೂರ, ಪಾರ್ವತಿ ತುಂಗಳ ಪಾಲ್ಗೊಂಡಿದ್ದರು.