ಸಮೂಹ ದೇವಾಲಯಗಳ ಹುಂಡಿಯಲ್ಲಿ 21. 78 ಲಕ್ಷ ರೂ. ಸಂಗ್ರಹ

 ಮಧ್ಯರಂಗನಾಥಸ್ವಾಮಿ ದೇವಸ್ಥಾನದ ದಾಸೋಹ ಭವನದಲ್ಲಿ ಹುಂಡಿ ಕಾರ್ಯ ನಡೆಯಿತು.
ಮಧ್ಯರಂಗನಾಥಸ್ವಾಮಿ ದೇವಸ್ಥಾನದ ದಾಸೋಹ ಭವನದಲ್ಲಿ ಹುಂಡಿ ಕಾರ್ಯ ನಡೆಯಿತು.
Published on

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಸಮೂಹ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ  ನಡೆದಿದ್ದು, ಸುಮಾರು 21,78,740 ಲಕ್ಷ ರೂ. ನಗದು ಹಾಗೂ 2 ಗ್ರಾಂ ಚಿನ್ನ, 8 ಗ್ರಾಂ ಬೆಳ್ಳಿ ಪದಾರ್ಥ ಸಂಗ್ರಹವಾಗಿದೆ.

ತಾಲೂಕಿನ ಮಧ್ಯರಂಗನಾಥಸ್ವಾಮಿ ದೇವಸ್ಥಾನದ ದಾಸೋಹ ಭವನದಲ್ಲಿ ಉಪವಿಭಾಗಾಧಿಕಾರಿ ಮಹೇಶ್ ಆದೇಶದಂತೆ ಹುಂಡಿ ಏಣಿಕೆ ಕಾರ್ಯ ನಡೆಯಿತು. ಸಮೂಹ ದೇವಾಲಯಗಳಾದ ಶ್ರೀ ಮಧ್ಯರಂಗ ನಾಥಸ್ವಾಮಿ, ಶ್ರೀ ಸೋಮೇಶ್ವರಸ್ವಾಮಿ ಹಾಗೂ ಆದಿಶಕ್ತಿ ಮಾರಮ್ಮ ದೇವಾಲಯಗಳ ಹುಂಡಿಗಳಲ್ಲಿ ಸುಮಾರು 21,78,740 ಲಕ್ಷ ರೂ. ನಗದು ಹಾಗೂ 2 ಗ್ರಾಂ ಚಿನ್ನ, 8 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

ಎಣಿಕೆ ಕಾರ್ಯದಲ್ಲಿ ಪಾಳ್ಯ ಉಪ ತಹಸೀಲ್ದಾರ್ ವಿಜಯ್‌ಕುಮಾರ್, ರಾಜಸ್ವ ನೀರಿಕ್ಷಕ ರಂಗಸ್ವಾಮಿ, ಕಸಬಾ ರಾಜಸ್ವ ನೀರಿಕ್ಷಕ ನಿರಂಜನ್, ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ್, ಗ್ರಾಮ ಲೆಕ್ಕಾಧಿಕಾರಿ ಶಾಂತರಾಜು, ಪ್ರದೀಪ್, ಭೀಮಪ್ಪ, ಮಹೇಶ್, ಮಮತಾ, ರಾಕೇಶ್ ಮರಾಠ, ಅನಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net