

ಕದರೀಪುರ; ಕೋಲಾರ ತಾಲೂಕು ವೇಮಗಲ್ ಹೋಬಳಿಯ ಸೀತಿ ಗ್ರಾಮದ ಪುರಾಣ ಪ್ರಸಿದ್ಧ, ಮುಜುರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಶ್ರೀ ಸೀತಿಭೈರವೇಶ್ವರ ಹಾಗೂ ಶ್ರೀಪತೇಶ್ವರ ಸ್ವಾಮಿ ದೇವಾಲಯದ ಹುಂಡಿಗಳನ್ನು ಬುಧವಾರ ಎಣಿಸಲಾಗಿದ್ದು, 20,18,182 ರೂ. ಸಂಗ್ರಹವಾಗಿದೆ.
ಸೀತಿ ಜಾತ್ರಾ ಮಹೋತ್ಸವ ಏಪ್ರಿಲ್ತಿಂಗಳಲ್ಲಿ ನಡೆಯಲಿದ್ದು, 3 ತಿಂಗಳಿಗೊಮ್ಮೆ ಹುಂಡಿ ಎಣಿಕೆ ನಡೆಯುತ್ತಿತ್ತು. ಜಾತ್ರೆ ಸಮೀಪಿಸುತ್ತಿರುವ ಕಾರಣ 2 ತಿಂಗಳ ಅಂತರದಲ್ಲಿ ಹುಂಡಿ ಎಣಿಕೆ ಮಾಡಲಾಯಿತು.
ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮೆ ಮಾಡಲಾಯಿತು.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರಹ್ಮಣಿ, ಪಾರುಪತ್ತೇದಾರ ವೆಂಕಟೇಶ್, ಗಣಕಯಂತ್ರ ನಿರ್ವಾಹಕಿ ನಿರ್ಮಲ, ಮದ್ದೇರಿ ಕೆನರಾ ಬ್ಯಾಂಕ್ ಮುಖ್ಯವ್ಯವಸ್ಥಾಪಕ ಇಂದ್ರಜಿತ್ ಸಿಂಗ್, ಸಿಬ್ಬಂದಿ ಮಂಜುನಾಥ್, ರಾಜೇಶ್ ಬಾಬು, ಚಂಜಿಮಲೆ ಮುನೇಗೌಡ, ವೇಮಗಲ್ ಪೊಲೀಸ್ ಠಾಣೆ ಸಿಬ್ಬಂದಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಧಿಕಾರಿಗಳು, ಗ್ರಾಮ ಸಹಾಯಕರು, ಸ್ವಯಂ ಸೇವಕರು, ದೇವಾಲಯದ ಸಿಬ್ಬಂದಿ ಇದ್ದರು.