ಚೆಕ್​ ಡ್ಯಾಂ ಮರು ನಿರ್ಮಾಣಕ್ಕೆ 2.75 ಕೋಟಿ ರೂ.

Published on

ರಾಜ್ಯ ಸರ್ಕಾರದಿಂದ ಆದೇಶ

ಗೌರಿಬಿದನೂರು: ವಿದುರಾಶತ್ಥ ಗ್ರಾಮದ ಮೂಲಕ ಹರಿಯುವ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚೆಕ್​ ಡ್ಯಾಂ ಪುನರ್​ ನಿರ್ಮಾಣಕ್ಕೆ ರಾಜ್ಯ ಸರ್ಕಾರ 2.75 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಿದೆ. ಈ ಮೊದಲು ನಿರ್ಮಿಸಿದ್ದ ಚೆಕ್​ ಡ್ಯಾಂ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಪುನರ್​ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಕೃಷಿ ಮಾಜಿ ಸಚಿವ ಎನ್​.ಎಚ್​.ಶಿವಶಂಕರ ರೆಡ್ಡಿ ಸಣ್ಣ ನೀರಾವರಿ ಸಚಿವ ಬೋಸ್​ ರಾಜಗೆ ಪತ್ರ ಬರೆದಿದ್ದರು. ಮಾಜಿ ಸಚಿವರ ಮನವಿ ಪರಿಗಣಿಸಿ 2.75 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿಗೆ ಆದೇಶ ಹೊರಡಿಸಿದ್ದಾರೆ. ಚೆಕ್​ ಡ್ಯಾಂ ನಿರ್ಮಾಣದಿಂದ ಅಂತರ್ಜಲಮಟ್ಟ ವೃದ್ಧಿಯಾಗಲಿದೆ.ರೈತರ ಓಡಾಟ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಲಭ್ಯವಾಗಲಿದೆ. ಬಹುಪಯೋಗಿ

ಕಾಮಗಾರಿಗೆ ಅನುಮೋದನೆ ನೀಡಿ ಅನುದಾನ ಒದಗಿಸಿದ ಸಚಿವ ಬೋಸ್​ ರಾಜ್​ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಮಾಜಿ

ಸಚಿವ ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net