೨.೫ ಕೋಟಿ ರೂ. ಮಂಜೂರು

25CHIKODIGRAMEEN1
Published on

ಚಿಕ್ಕೋಡಿ ಗ್ರಾಮೀಣ: ಯಕ್ಸಂಬಾ ಪಟ್ಟಣ ಪಂಚಾಯಿತಿ ನೂತನ ಕಟ್ಟಡ ಕಾಮಗಾರಿ ಮಾರ್ಚ್ನಲ್ಲಿ ಪ್ರಾರಂಭಗೊಂಡಿದ್ದು, ಈಗ ಮೇಲ್ಛಾವಣಿ ಹಂತ ತಲುಪಿದೆ. ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿಯವರ ಪ್ರಯತ್ನದಿಂದ ಸರ್ಕಾರದಿಂದ ೨.೫ ಕೋಟಿ ರೂ. ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುನೀಲ ಸಪ್ತಸಾಗರೆ ಹೇಳಿದರು.

ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ೨.೫ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಪಟ್ಟಣ ಪಂಚಾಯಿತಿ ಬೃಹತ್ ಕಟ್ಟಡ ಕಾಮಗಾರಿ ಸ್ಲಾಬ್ ಕಾಮಗಾರಿ ಹಾಗೂ ದ್ವಿತೀಯ ಅಂತಸ್ತಿನ ಕಾಮಗಾರಿ ಪೂಜೆ ನೆರವೇರಿಸಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಪಪಂ ಅಧ್ಯಕ್ಷ ಸುನೀಲ ಸಪ್ತಸಾಗರೆ, ಉಪಾಧ್ಯಕ್ಷೆ ಸುಜಾತಾ ಚಿತಳೆ, ಪಪಂ ಸದಸ್ಯರಾದ ಕೀರಣ ಮಾಳಿ, ರವೀಂದ್ರ ಮಾನೆ, ಶಿವಗೌಡ ಬಾವಚೆ, ಚಿದಾನಂದ ಬೆಳ್ಳೆ, ಉಮೇಶ ಸಾತ್ವರ, ಅಂಕುಶ ಖೊತ, ಜಮ್ಮನಶಾ ಮಕಾನದಾರ, ರವೀಂದ್ರ ಖೋತ, ವಿಠ್ಠಲ ನಾಯಿಕ, ಸೈಹೀದಾ ಮುಲ್ಲಾ, ಪ್ರೇಮಾ ಮಾಳಗೆ, ರಾಜಶ್ರೀ ಮಗದುಮ್ಮ, ಸಂಗೀತಾ ಪವಾರ, ಶಾನಕ್ಕ ರಾಂಗೋಳೆ, ಅರುಣ ಮಗದುಮ್ಮ, ವಿನೋದ ಚಿತಳೆ, ಮಹಾಲಿಂಗ ವಸ್ತçದ, ಜ್ಯೋತಿ ಸಾತ್ವರ, ಮುನೀರ ದಾಡಿವಾಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net