2.16 ಲಕ್ಷ ರೂ. ಉಳಿತಾಯ ಬಜೆಟ್

21MKH1
Published on

ಎಂ.ಕೆ. ಹುಬ್ಬಳ್ಳಿ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಕೊಡ್ಲಿ ಅಧ್ಯಕ್ಷತೆಯಲ್ಲಿ ಶುಕ್ರವಾರ 2025-26ನೇ ಸಾಲಿನಲ್ಲಿ 3.24 ಕೋಟಿ ರೂ. ಮೊತ್ತದ ಆಯವ್ಯಯ ಮಂಡಿಸಲಾಯಿತು.

ಎಸ್‌ಎ್ಸಿ ಅಭಿವದ್ಧಿ ಅನುದಾನ, 15ನೇ ಹಣಕಾಸು, ಆಸ್ತಿ ತೆರಿಗೆ, ನೀರಿನ ಕರ ಸೇರಿ ಇತರ ಮೂಲಗಳಿಂದ 3,24,64,434 ರೂ. ಮೊತ್ತದ ಆದಾಯದ ಗುರಿ ಹೊಂದಲಾಗಿದೆ.

ಎಸ್‌ಎ್ಸಿ ಮತ್ತು 15ನೇ ಹಣಕಾಸು ಅನುದಾನದಡಿ ಪಟ್ಟಣದ ವಿವಿಧೆಡೆ ಅಭಿವದ್ಧಿ, ಸಿಬ್ಬಂದಿ ವೇತನ, ವಿದ್ಯುತ್ ಶಕ್ತಿ ಬಿಲ್, ಘನತ್ಯಾಜ್ಯ, ಬೀದಿದೀಪಗಳ ನಿರ್ವಹಣೆ ಸೇರಿ ವಿವಿಧ ಖರ್ಚುಗಳಿಗೆ 3.22 ಕೋಟಿ ರೂ. ನಿಗದಿಪಡಿಸಲಾಗಿದೆ. ಖರ್ಚು ಕಳೆದು 2.16ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ ವಿವರಣೆ ನೀಡಿದರು.

ಸಕಾಲದಲ್ಲಿ ತೆರಿಗೆ ಪಾವತಿಸುವ ಮೂಲಕ ಪಟ್ಟಣದ ಅಭಿವದ್ಧಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಮಿತವಾಗಿ ನೀರು ಬಳಕೆ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆಸ್ತಿಗಳ ಉತಾರ ಪಡೆಯಲು ಸಾರ್ವಜನಿಕರು ಕಾಯಬೇಕಿಲ್ಲ. ಸರಿಯಾದ ದಾಖಲಾತಿ, ತೆರಿಗೆ ಪಾವತಿ ಇದ್ದರೆ ಒಂದೇ ದಿನದಲ್ಲಿ ವಿತರಿಸುತ್ತೇವೆ. ಎಲ್ಲ ದಾಖಲೆಗಳಿದ್ದರೂ ಸಿಬ್ಬಂದಿಯಿಂದ ಸಕಾಲದಲ್ಲಿ ಉತಾರಗಳ ವಿತರಣೆಯಾಗದಿದ್ದರೆ ತಕ್ಷಣವೇ ಗಮನಕ್ಕೆ ತರುವಂತೆ ಮುಖ್ಯಾಧಿಕಾರಿ ಸಾರ್ವಜನಿಕರಿಗೆ ಮನವಿ ಮಾಡಿದರು.

ಪಪಂ ಅಧ್ಯಕ್ಷ ಪ್ರಕಾಶ ಕೊಡ್ಲಿ ಅಧ್ಯಕ್ಷತೆಯಲ್ಲಿ ಅಂದಾಜು ಬಜೆಟ್ ಮಂಡನೆ ಸಭೆ ಜರುಗಿತು. ಉಪಾಧ್ಯಕ್ಷ ಮಂಜುನಾಥ ಕಡಕೋಳ, ಸದಸ್ಯರಾದ ದೇಮಪ್ಪ ಬಸರಗಿ, ದೊಡ್ಡಪ್ಪ ಗಣಾಚಾರಿ, ಲಕ್ಷ್ಮೀ ನಾಗನೂರ, ಸಾವಿತ್ರಿ ಹೊನ್ನಣ್ಣವರ, ಸುಶೀಲಾ ಗಣಾಚಾರಿ, ಪರವಿನ್ ನಬುವಾಲೆ, ಸಮೀರ್ ಪಟೇಲ್, ಮಂಗಳಾ ದೇಮಟ್ಟಿ, ಸಮುದಾಯ ಸಂಘಟನಾಧಿಕಾರಿ ಎ.ಎಸ್. ಶೆಟ್ಟರ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net