ಲಾಟರಿ ಹೆಸರಲ್ಲಿ 14 ಲಕ್ಷ ರೂ. ವಂಚನೆ

CYBER CRIME
Published on

ಹುಬ್ಬಳ್ಳಿ: ಲಾಟರಿ ಹೊಡೆದಿದ್ದು ಕ್ಲೇಮ್ ಮಾಡಲು ತೆರಿಗೆ ಪಾವತಿಸಬೇಕು ಎಂದು ವಾಟ್ಸ್‌ಆ್ಯಪ್ ಮೂಲಕ ಸಂದೇಶ ರವಾನಿಸಿದ ಖದೀಮರು, ಧಾರವಾಡದ ಕೊಪ್ಪತಕೆರೆಯ ಮಹಿಳೆಯೊಬ್ಬರಿಂದ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಮನೆಯಲ್ಲಿದ್ದಾಗ ವಾಟ್ಸ್‌ಆ್ಯಪ್ ಸಂದೇಶ ರವಾನಿಸಿದ ಖದೀಮರು ನಾವು ಕೆಬಿಸಿ ಕಡೆಯವರು ಎಂದಿದ್ದಾರೆ. ನಿಮಗೆ ಲಾಟರಿ ಹೊಡೆದಿದ್ದು, ತೆರಿಗೆ ಎಂದು 8,100 ರೂ. ಹಾಕಬೇಕೆಂದು ನಂಬಿಸಿದ್ದಾರೆ. ಹಂತ ಹಂತವಾಗಿ ಆನ್‌ಲೈನ್ ಮೂಲಕ 14 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೂಡಿಕೆ ವಂಚನೆ

ಗ್ರೂಪ್‌ಆನ್ ಮರ್ಚೆಂಟ್ 31 ಶಾಪ್ ವೆಬ್‌ಸೈಟ್‌ನಲ್ಲಿ ಹೂಡಿಕೆ ಮಾಡಿದರೆ ಅತ್ಯಧಿಕ ಹಣ ಗಳಿಸಬಹುದೆಂದು ನಂಬಿಸಿ, ಗೋಕುಲ ರೋಡ್‌ನ ಮಹಿಳೆಯಿಂದ ಆನ್‌ಲೈನ್ ಮೂಲಕ 2.97 ಲಕ್ಷ ರೂ. ವರ್ಗಾಯಿಸಿಕೊಂಡಿರುವ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗಳ್ಳತನ

ಮನೆ ಕೀಲಿ ಮುರಿದು 4.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ನಡೆದಿದೆ. ಮನೆ ಕೀಲಿ ಮುರಿದು ಒಳಪ್ರವೇಶಿಸಿದ ಕಳ್ಳರು 1.20 ಲಕ್ಷ ರೂ. ಮೌಲ್ಯದ 3 ತೊಲ ಬಂಗಾರ, 3 ಲಕ್ಷ ರೂ. ನಗದು, ಚೆಕ್‌ಬುಕ್ ಕಳವು ಮಾಡಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net