

ಲಿಂಗಸುಗೂರು: ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಬಾಬೂರಡ್ಡಿ ಮುನ್ನೂರು ಅಧ್ಯಕ್ಷತೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ 2025-26ನೇ ಸಾಲಿನ ಆಯವ್ಯಯ ಸಭೆಯಲ್ಲಿ 11,96,200 ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.
ಆಸ್ತಿ, ನೀರಿನ ತೆರಿಗೆಯಿಂದ 7.10 ಕೋಟಿ ರೂ., ಇತರ ದಂಡ ರೂಪದ ತೆರಿಗೆಗಳಿಂದ 85 ಲಕ್ಷ ರೂ., ವಾಣಿಜ್ಯ ಮಳಿಗೆಗಳಿಂದ ರೂ. 40 ಲಕ್ಷ, 15 ನೇ ಹಣಕಾಸು ಯೋಜನೆಯಿಂದ 1.90 ಕೋಟಿ ರೂ., ವೇತನ ಅನುದಾನ 4.80 ಕೋಟಿ ರೂ., ವಿದ್ಯುತ್‌ಚ್ಛಕ್ತಿ ಅನುದಾನ 2.50 ಕೋಟಿ ರೂ., ಸ್ವಚ್ಛ ಭಾರತ ಅಭಿಯಾನ 1.80 ಕೋಟಿ ರೂ., ಪೌರ ಕಾರ್ಮಿಕ ಗೃಹಭಾಗ್ಯ ಅನುದಾನ 70 ಲಕ್ಷ ರೂ., ಕೆಕೆಆರ್‌ಡಿಬಿ ಅನುದಾನ 80 ಲಕ್ಷ ಸೇರಿ ವಿವಿಧ ಮೂಲಗಳಿಂದ ಒಟ್ಟು 18,76,95,000 ರೂ. ಆದಾಯ ಸಂಗ್ರಹ ನಿರೀಕ್ಷೆ ಹೊಂದಲಾಗಿದೆ.
ಇನ್ನು ಕಾಯಂ ಸಿಬ್ಬಂದಿ ವೇತನ 4.80 ಕೋಟಿ ರೂ., ದಿನಗೂಲಿ ಸಿಬ್ಬಂದಿ ವೇತನ 50 ಲಕ್ಷ ರೂ., ಹೊರಗುತ್ತಿಗೆ ಸಿಬ್ಬಂದಿ ವೇತನ 25.80 ಲಕ್ಷ ರೂ., ಬೀದಿ ದೀಪಗಳ ಅಳವಡಿಕೆ ನಿರ್ವಹಣೆ 40 ಲಕ್ಷ ರೂ., ಕುಡಿವ ನೀರು ಸರಬರಾಜು ನಿರ್ವಹಣೆಗೆ 85 ಲಕ್ಷ ರೂ., ರಸ್ತೆ ಅಭಿವೃದ್ಧಿಗೆ 1.73 ಕೋಟಿ ರೂ., ವಿದ್ಯುತ್‌ಚ್ಛಕ್ತಿ ವೆಚ್ಚ 2.50 ಕೋಟಿ ರೂ., ಭವನಗಳ ನಿರ್ವಹಣೆಗೆ 45 ಲಕ್ಷ ರೂ., ಘನತ್ಯಾಜ್ಯ ವಿಲೇವಾರಿ ಘಟಕದ ಅಭಿವೃದ್ಧಿಗೆ 80 ಲಕ್ಷ ರೂ., ಸಲಕರಣೆ ಮತ್ತು ವಾಹನಗಳ ಖರೀದಿಗೆ 90 ಲಕ್ಷ ರೂ. ಸೇರಿ ವಿವಿಧ ಕಾರ್ಯಗಳಿಗೆ ಒಟ್ಟು 18, 64, 98,800 ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆ 2025-26 ನೇ ಸಾಲಿನಲ್ಲಿ ವಿವಿಧ ಮೂಲಗಳಿಂದ ಸಂಗ್ರಹವಾಗುವ 18,76,95,000 ರೂ. ಆದಾಯದಲ್ಲಿ 18,64,98,800 ರೂ. ವ್ಯಯವಾಗಲಿದ್ದು, ಪ್ರಸಕ್ತ ಸಾಲಿನಲ್ಲಿ 11,96,200 ರೂ. ಉಳಿತಾಯವಾಗಲಿದೆ ಎಂದು ಪುರಸಭೆ ವ್ಯವಸ್ಥಾಪಕ ಹನುಮಂತ ನಾಯಕ ಸಭೆಗೆ ವಿವರಿಸಿದರು.