ರೈತರ ಕಲ್ಯಾಣಕ್ಕೆ 10 ಕೋಟಿ ರೂ. ಮೀಸಲು

18manju5
Published on

ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ ಹಾಲು&ಉತ್ಪಾದಕರ ಸಂಗಳ ಒಕ್ಕೂಟ (ಬೆಮುಲ್​) 2024&25ನೇ ಸಾಲಿನಲ್ಲಿ 13 ಕೋಟಿ ರೂ. ಲಾಭ ಗಳಿಸಿದೆ. ಈ ಪೈಕಿ ರೈತರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳಿಗೆ 10 ಕೋಟಿ ರೂ. ಮೀಸಲಿಡಲಾಗಿದೆ ಎಂದು ಬೆಮುಲ್​ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರದ ಬೆಮುಲ್​ ಆವರಣದಲ್ಲಿ ರೈತರಿಗೆ 6 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕೃಷಿ ಸಲಕರಣೆ ವಿತರಿಸಿ ಮಾತನಾಡಿದ ಅವರು, ಬೆಮುಲ್​ ಲಾಭದ ಹಂಚಿಕೆಯಲ್ಲಿ ರೈತರಿಗೆ ಅನೇಕ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಶೇ.60 ರಷ್ಟು ರಿಯಾಯಿತಿ ದರದಲ್ಲಿ ವಿವಿಧ ಸಾಮಗ್ರಿ ವಿತರಿಸಲು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.

ರೈತರ ಅನುಕೂಲಕ್ಕಾಗಿ ವಿನಿಯೋಗ: ಈಗಾಗಲೇ 2.46 ಕೋಟಿ ರೂ. ವೆಚ್ಚದಲ್ಲಿ 3,100 ಫಲಾನುಭವಿಗಳಿಗೆ 10 ಸಾವಿರ ರಬ್ಬರ್​ ಮ್ಯಾಟ್​ ಖರೀದಿ ಮಾಡಲಾಗಿದೆ. 86.10 ಲ ರೂ. ವೆಚ್ಚದಲ್ಲಿ 350 ಫಲಾನುಭವಿಗಳಿಗೆ ವಿದ್ಯುತ್​ಚಾಲಿತ 2 ಎಚ್​ಪಿ ಮೇವು ಕತ್ತರಿಸುವ ಯಂತ್ರ, 13.95 ಲ ರೂ. ವೆಚ್ಚದಲ್ಲಿ 50 ಫಲಾನುಭವಿಗಳಿಗೆ ವಿದ್ಯುತ್​ ಚಾಲಿತ ಹಾಲು ಕರೆಯುವ ಯಂತ್ರ ಖರೀದಿಸಲಾಗಿದೆ. ಸ್ವಂತ ಕಟ್ಟಡ ಹೊಂದಿರುವ 40 ಸಂಗಳಿಗೆ ತಲಾ 5 ಲ ರೂ. ರಂತೆ ಒಟ್ಟು 2 ಕೋಟಿ ರೂ. ಸಹಾಯಧನ ನೀಡಲಾಗುತ್ತಿದೆ. 15 ಹೊಸ ಬಿಎಂಸಿ ಟಕ ಖರೀದಿಸಲು 1.72 ಕೋಟಿ ರೂ. ಸೇರಿದಂತೆ ಸುಮಾರು 6 ಕೋಟಿ ರೂ.ವೆಚ್ಚದ ಸಾಮಗ್ರಿ ಈಗ ಹಂಚಿಕೆ ಮಾಡಲಾಗುತ್ತಿದೆ. ಒಟ್ಟಾರೆ ಹತ್ತು ಕೋಟಿ ರೂ. ಹೈನುಗಾರಿಕೆ ಮಾಡುವ ರೈತರ ಅನುಕೂಲಕ್ಕಾಗಿ ಬಳಕೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಒಕ್ಕೂಟದ ನಿರ್ದೇಶಕ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಡಾ. ಬಸವರಾಜ ಪರಣ್ಣವರ, ಬಾಬುರಾವ ವಾಮೋಡೆ, ವಿರುಪಾ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರೆ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ಶಂಕರ ಇಟ್ನಾಳ, ಸವಿತಾ ಖಾನಪ್ಪಗೋಳ, ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎನ್​.ಶ್ರೀಕಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net