ರಸ್ತೆ ಸುಧಾರಣೆಗೆ 10 ಕೋಟಿ ರೂ. ಅನುದಾನ

30GKK1
Published on

ಗೋಕಾಕ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ರಸ್ತೆ ಸುಧಾರಣಾ ಕಾಮಗಾರಿಗಳಿಗೆ ಒಟ್ಟು 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಕೌಜಲಗಿ- ಹೊನಕುಪ್ಪಿ ರಸ್ತೆ ಸುಧಾರಣೆಗೆ ಬಿಡುಗಡೆಯಾದ 1.20 ಕೋಟಿ ರೂ. ವೆಚ್ಚದ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಸೂಚನೆ ನೀಡಿದರು.

ಪ್ರಭಾ ಶುಗರ್ಸ್ ನಿರ್ದೇಶಕ ಎಂ.ಆರ್. ಭೋವಿ, ಜಿಪಂ ಮಾಜಿ ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ, ಪರಮೇಶ್ವರ ಹೊಸಮನಿ, ರವಿ ಪರುಶೆಟ್ಟಿ, ಎಂ.ಎನ್.ಶಿವನಮಾರಿ, ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ ಉದ್ದಪ್ಪನವರ, ರಾಯಪ್ಪ ಬಳೋಳದಾರ, ನೀಲಪ್ಪ ಕೇವಟಿ, ಹೊಳೆಪ್ಪ ಲೋಕನ್ನವರ, ಸಿದ್ದಪ್ಪ ಹಳ್ಳೂರ, ಮಹೇಶ ಪಟ್ಟಣಶೆಟ್ಟಿ, ಬಿ.ಎಚ್.ಪಾಟೀಲ, ವೆಂಕಟೇಶ ದಳವಾಯಿ, ಶಂಕರ ಜೋತಿನವರ, ಶಾಂತಪ್ಪ ಹಿರೇಮೇತ್ರಿ, ಅವ್ವಣ್ಣ ಮೋಡಿ, ಬಸು ಜೋಗಿ, ಹಾಸೀಂ ನಗಾರ್ಚಿ, ಶ್ರೀಶೈಲ ಗಾಣಿಗೇರ, ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net