ರಸ್ತೆ ಸುಧಾರಣೆಗೆ 10 ಕೋಟಿ ರೂ. ಅನುದಾನ

30GKK1
Published on

ಗೋಕಾಕ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆಯಿಂದ ರಸ್ತೆ ಸುಧಾರಣಾ ಕಾಮಗಾರಿಗಳಿಗೆ ಒಟ್ಟು 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಕೌಜಲಗಿ& ಹೊನಕುಪ್ಪಿ ರಸ್ತೆ ಸುಧಾರಣೆಗೆ ಬಿಡುಗಡೆಯಾದ 1.20 ಕೋಟಿ ರೂ. ವೆಚ್ಚದ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಯಾದವಾಡ ಮುಖ್ಯರಸ್ತೆಯಿಂದ ಕುಲಗೋಡದ ಹಣಮಂತ ದೇವಸ್ಥಾನ ಹೊಸಟ್ಟಿ ಕೂಡುರಸ್ತೆಗೆ 60 ಲ ರೂ., ಮುನ್ಯಾಳ ಲಕ್ಷಿ$್ಮದೇವಿ ಗುಡಿಯಿಂದ ರಂಗಾಪುರ ಕಮಲದಿನ್ನಿ ಮುಖ್ಯರಸ್ತೆಗೆ 1.20 ಕೋಟಿ ರೂ., ಯಾದವಾಡ ಒಂಟಗೋಡಿ ರಸ್ತೆ ಡಾಂಬರೀಕರಣಕ್ಕೆ 1.80 ಕೋಟಿ ರೂ., ಯಾದವಾಡ ಹರಿಜನ ಕೇರಿಯಿಂದ ಮುಧೋಳ ರಸ್ತೆತನಕ 60 ಲ ರೂ., ತಿಗಡಿಯಿಂದ ವಾಲೀಕಾರ ತೋಟದತನಕ 60 ಲ ರೂ., ಅರಭಾವಿ&ಸತ್ತಿಗೇರಿ ಮಡ್ಡಿರಸ್ತೆ ಡಾಂಬರೀಕರಣಕ್ಕೆ 1 ಕೋಟಿ ರೂ., ಯಾದವಾಡ ಸಂಗನಕೇರಿ ರಸ್ತೆಯಿಂದ ುಲಗಡ್ಡಿ ಕೂಡುರಸ್ತೆವರೆಗೆ 1.20 ಕೋಟಿ ರೂ., ರಂಗಾಪುರ ರಸ್ತೆಗೆ 60 ಲ ರೂ. ಸೇರಿ ಒಟ್ಟು 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಸೂಚನೆ ನೀಡಿದರು.

ಪ್ರಭಾ ಶುಗರ್ಸ್​ ನಿರ್ದೇಶಕ ಎಂ.ಆರ್​. ಭೋವಿ, ಜಿಪಂ ಮಾಜಿ ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ, ಪರಮೇಶ್ವರ ಹೊಸಮನಿ, ರವಿ ಪರುಶೆಟ್ಟಿ, ಎಂ.ಎನ್​.ಶಿವನಮಾರಿ, ಗ್ರಾಪಂ ಮಾಜಿ ಅಧ್ಯ ಅಶೋಕ ಉದ್ದಪ್ಪನವರ, ರಾಯಪ್ಪ ಬಳೋಳದಾರ, ನೀಲಪ್ಪ ಕೇವಟಿ, ಹೊಳೆಪ್ಪ ಲೋಕನ್ನವರ, ಸಿದ್ದಪ್ಪ ಹಳ್ಳೂರ, ಮಹೇಶ ಪಟ್ಟಣಶೆಟ್ಟಿ, ಬಿ.ಎಚ್​.ಪಾಟೀಲ, ವೆಂಕಟೇಶ ದಳವಾಯಿ, ಶಂಕರ ಜೋತಿನವರ, ಶಾಂತಪ್ಪ ಹಿರೇಮೇತ್ರಿ, ಅವ್ವಣ್ಣ ಮೋಡಿ, ಬಸು ಜೋಗಿ, ಹಾಸೀಂ ನಗಾರ್ಚಿ, ಶ್ರೀಶೆಲ ಗಾಣಿಗೇರ, ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net