ಹುತಾತ್ಮ ಯೋಧರ ಕುಟುಂಬಕ್ಕೆ 1 ಲಕ್ಷ ರೂ. ನೆರವು

07 05 2025_BNG_RURAL_FLAP_8B
ಹೊಸಕೋಟೆಯ ಹುತಾತ್ಮ ಯೋಧ ಭರತ್​ ಬಬನ್​ ಮಸ್ಕಿ ಅವರ ಪತ್ನಿ ಲಕ್ಷಿ$್ಮ ಅವರಿಗೆ ವಹ್ನಿಕುಲ ತಿಗಳ ಸಂದ ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್​ ಅವರು 1 ಲಕ್ಷ ರೂ. ಸಹಾಯಧನದ ಚೆಕ್​ ನೀಡಿ, ಸನ್ಮಾನಿಸಿದರು. ಡಾ.ಸಿ.ಜಯರಾಜ್​ ಅವರ ಪತ್ನಿ ಲಕ್ಷಿ$್ಮ, ಪುತ್ರ ಸಚಿನ್​, ನಿವೃತ್ತ ಪೊಲೀಸ್​ ಅಧಿಕಾರಿ ಸುಬ್ಬಣ್ಣ, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಬಿ.ವಿ.ಸತೀಶ್​ ಗೌಡ, ಯೋಜನಾ ಪ್ರಾಧಿಕಾರ ನಿರ್ದೇಶಕ ಡಾ.ಎಚ್​ಎಂ.ಸುಬ್ಬರಾಜ್​, ಉಮೇಶ್​, ರವಿ, ಮಂಜುನಾಥ್​, ಆನಂದ್​, ಯೋಧ ಬಸವರಾಜ್​ ಇದ್ದರು.
Published on

ಹೊಸಕೋಟೆ : ಕಾರ್ಗಿಲ್​ನಲ್ಲಿ ಹುತಾತ್ಮರಾದ ವೀರ ಯೋಧ ನಗರದ ಭರತ್​ ಬಬನ್​ ಮಸ್ಕಿ ಅವರ ಕುಟುಂಬಕ್ಕೆ ವಹ್ನಿಕುಲ ತಿಗಳ ಸಂದ ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್​ ಅವರು 1 ಲಕ್ಷ ರೂ. ಸಹಾಯಧನ ನೀಡಿದರು.

ಈ ವೇಳೆ ಮಾತನಾಡಿದ ಅವರು, ದೇಶಕ್ಕಾಗಿ ಹೋರಾಡಿ ವೀರ ಮರಣವನ್ನಪ್ಪಿದ ಯೋಧರ ಕುಟುಂಬಕ್ಕೆ ಸಹಾಯ ಮಾಡುವುದು ಸಾರ್ಥಕ ಭಾವ ಮೂಡಿಸುತ್ತದೆ. ಸೇನೆಯಲ್ಲಿ 10 ವರ್ಷ ಸೇವೆ ಸಲ್ಲಿಸಿ, ಕಾರ್ಗಿಲ್​ನಲ್ಲಿ ಶತ್ರುಗಳ ಬಾಂಬ್​ ದಾಳಿಗೆ ವೀರಮರಣ ಹೊಂದಿದ ಸಿಪಾಯಿ ಭರತ್​ ಬಬನ್​ ಮಸ್ಕಿ ಅವರ ಸೇವೆ ಸ್ಮರಣೀಯ ಎಂದರು. ಇದೇ ವೇಳೆ ನಗರದ ದಂಡುಪಾಳ್ಯದ ಜ್ಯೋತಿಯಮ್ಮ ದೇಗುಲ ಹಾಗೂ ತಿಮ್ಮಸಂದ್ರದ ಶ್ರೀ ಬಸವಣ್ಣ ದೇವಸ್ಥಾನದ ನಿರ್ಮಾಣಕ್ಕೆ ದೇಣಿಗೆ ನೀಡಿದ ಜಯರಾಜ್​ ಅವರು, "ಶ್ರೀ ಕರಗ ಒಂದು ಆಧ್ಯಾತ್ಮಿಕ ಚಿಂತನೆ' ಪುಸ್ತಕವನ್ನು ಬಿಡುಗಡೆ ಮಾಡಿದರು.

ಡಾ.ಸಿ.ಜಯರಾಜ್​ ಅವರ ಪತ್ನಿ ಲಕ್ಷಿ$್ಮ, ಪುತ್ರ ಸಚಿನ್​, ನಿವೃತ್ತ ಪೊಲೀಸ್​ ಅಧಿಕಾರಿ ಸುಬ್ಬಣ್ಣ, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಬಿ.ವಿ.ಸತೀಶ್​ ಗೌಡ, ಯೋಜನಾ ಪ್ರಾಧಿಕಾರ ನಿರ್ದೇಶಕ ಡಾ.ಎಚ್​ಎಂ.ಸುಬ್ಬರಾಜ್​, ಉಮೇಶ್​, ರವಿ, ಮಂಜುನಾಥ್​, ಆನಂದ್​, ಯೋಧ ಬಸವರಾಜ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net